ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮನೆಯು ಇಲ್ಲ.. ನೆರವು ಇಲ್ಲ.. ! - ನಿವಾಸಿಗಳ ಗೋಳು

ಬೆಂಗಳೂರು : ರಾಜಾಜಿನಗರ ವಿಧಾನಸಭೆ ಕ್ಷೇತ್ರದ ರಾಮಮಂದಿರ ವಾರ್ಡ್‌ನ ಐದನೇ ಬ್ಲಾಕ್‌ನಲ್ಲಿರುವ ಹರಿಜನ ಸೇವಾ ಸಂಘ ಕಾಲೋನಿಯಲ್ಲಿ ರಾಜ ಕಾಲುವೆ ಮೇಲೆ ಕಟ್ಟಿದ್ದ ಮನೆ ಕೆಡವಿ ವಾರಗಳೇ ಉರುಳಿವೆ. ಸುಮಾರು 45 ವರ್ಷದಿಂದ ಈ ನಿವಾಸಿಗಳು ಇಲ್ಲೇ ಇದ್ದಾರೆ... ದೊಡ್ಡ ಮೋರಿಯ ಮೇಲೆಯೇ ಇವ್ರು ಮನೆಗಳನ್ನ ಕಟ್ಕೊಂಡು 45 ವರ್ಷದಿಂದ ಜೀವನ ಮಾಡಿದ್ದಾರೆ...

ಆದರೆ ಕಳೆದ ಬುಧವಾರ ಅದೇನ್ ಆಯ್ತೋ ಏನೋ ಮೋರಿ ಮೇಲೆ ಕಟ್ಟಿಕೊಂಡಿದ್ದ ಮನೆಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿವೆ. ರಾಜಕಾಲುವೆಯ ಸ್ಲ್ಯಾಬ್ ಗಳು ಮುರಿದು ಬಿದ್ದ ಪರಿಣಾಮ ಅದರ ಮೇಲೆ ಕಟ್ಟಲಾಗಿದ್ದ ಆರು ಮನೆಗಳು ನೆಲಸಮ ಆಗಿದೆ...

ಈ‌ ಮನೆಗಳು ರಾಜಕಾಲುವೆ ಮೇಲೆ ಕಟ್ಟಲಾಗಿದೆ ಅನ್ನೋದು ಬಿಬಿಎಂಪಿಗೂ ಗೊತ್ತಿದೆ. ಬಿಡಿಎ ಅವರಿಗೂ ಗೊತ್ತಿದೆ. ಅವರನ್ನ ತೆರವು ಮಾಡುವ ಕೆಲಸ ಮಾಡಿಲ್ಲ. ಅದರ ಬದಲಾಗಿ ಅವರಿಗೆ ಹಕ್ಕುಪತ್ರಗಳನ್ನ ನೀಡಲಾಗಿದೆ. ಈ ಬಗ್ಗೆ ಜನರನ್ನ ಕೇಳಿದ್ರೆ ನಾವು 45 ವರ್ಷದಿಂದ ಇಲ್ಲಿದ್ದೇವೆ, ಅಧಿಕಾರಿಗಳು ನಮ್ಮನ್ನ ಬೇರೆ ಕಡೆ ಶಿಫ್ಟ್ ಮಾಡ್ತೇವೆ, ಮನೆಗಳನ್ನ ಕಟ್ಟಿಕೊಡ್ತೇವೆ ಅಂತ ಹೇಳಿದವರು ಯಾರೂ ಮಾಡಿಕೊಟ್ಟಿಲ್ಲ ಅಂತಾರೆ.

ಈಗ ನೋಡಿದ್ರೆ ದಿಢೀರ್ ಅಂತ ಮನೆಗಳು ಬಿದ್ದಿವೆ. ಈಗಲೂ ಸಹ ಶೆಡ್ ಹಾಕಿ ಕೊಡ್ತೇವೆ ಅಂತ ಬಂದು ಹೋದ ಬಿಬಿಎಂಪಿ ಅವ್ರು ಒಂದು ವಾರ ಕಳೆದರೂ ಈ ಕಡೆ ಬಂದಿಲ್ಲವಂತೆ...

Edited By : Nagesh Gaonkar
PublicNext

PublicNext

14/11/2024 10:04 am

Cinque Terre

16.74 K

Cinque Terre

0

ಸಂಬಂಧಿತ ಸುದ್ದಿ