ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇರಾಕ್‌ನಲ್ಲಿ ʼಬಾಲ್ಯ ವಿವಾಹʼ ಕಾನೂನು ಬದ್ಧ, ಒಂಭತ್ತು ವಯಸ್ಸಿನ ಹುಡುಗಿಯನ್ನು ಮದುವೆಯಾಗಲು ಪುರುಷರಿಗೆ ಅವಕಾಶ..!

ಒಂಭತ್ತು ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಹೊಸ ವಿವಾಹ ಕಾನೂನನ್ನು ಇರಾಕ್‌ ದೇಶ ಜಾರಿಗೆ ತರಲು ಸಜ್ಜಾಗಿದೆ. ಅದರ ಜೊತೆಗೆ ಮಹಿಳೆಯರಿಗೆ ವಿಚ್ಛೇದನ,ಮಕ್ಕಳ ಪಾಲನೆ ಮತ್ತು ಉತ್ತರಾಧಿಕಾರದ ಹಕ್ಕನ್ನು ಕಸಿದುಕೊಳ್ಳುವ ಕಾನೂನು ತಿದ್ದಪಡಿಗೆ ಇರಾಕ್‌ ಮುಂದಾಗಿದೆ.ಶಿಯಾ ಪಕ್ಷಗಳ ಒಕ್ಕೂಟದ ನೇತೃತ್ವದ ಸಂಪ್ರದಾಯವಾದಿ ಸರ್ಕಾರವು ಅನೈತಿಕ ಸಂಬಂಧಗಳಿಂದ ಹುಡುಗಿಯರನ್ನು ರಕ್ಷಿಸುವ ಉದ್ದೇಶದಿಂದ ಈ ತಿದ್ದುಪಡಿಯನ್ನು ಮಾಡಲಾಗಿದ್ದು,ಇಸ್ಲಾಮಿಕ್ ಷರಿಯಾ ಕಾನೂನಿನ ಕಟ್ಟುನಿಟ್ಟಾದ ವ್ಯಾಖ್ಯಾನಕ್ಕೆ ಅನುಗುಣವಾಗಿದೆ ಎಂದು ಸಮ್ಮಿಶ್ರ ಸರ್ಕಾರ ಹೇಳಿದೆ. ಇರಾಕಿನ ಮಹಿಳಾ ಗುಂಪುಗಳ ವಿರೋಧದ ಹೊರತಾಗಿಯೂ ಸಂಸತ್ತಿನ ಬಹುಮತದೊಂದಿಗೆ ಸರ್ಕಾರವು ಶಾಸನವನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.

UNICEF ಪ್ರಕಾರ ಇರಾಕ್‌ ನಲ್ಲಿ ಈಗಾಗಲೇ ಬಾಲ್ಯವಿವಾಹ ಮಿತಿಮೀರಿದೆ,ಇರಾಕಿನ ಸುಮಾರು 28% ಹುಡುಗಿಯರು 18 ವರ್ಷ ವಯಸ್ಸಿನೊಳಗೆ ಮದುವೆಯಾಗುತ್ತಿದ್ದಾರೆ.ಪ್ರಸ್ತಾವಿತ ತಿದ್ದುಪಡಿಗಳು ವಿವಾಹ ಕಾನೂನನ್ನು ಮತ್ತಷ್ಟು ಹದಗೆಡಿಸುವುದರಲ್ಲಿ ಸಂಶಯವಿಲ್ಲ. ಕೌಟುಂಬಿಕ ವ್ಯವಹಾರಗಳ ಬಗ್ಗೆ ನಿರ್ಧರಿಸಲು ಧಾರ್ಮಿಕ ಅಧಿಕಾರಿಗಳು ಅಥವಾ ನಾಗರಿಕ ನ್ಯಾಯಾಂಗವನ್ನು ಆಯ್ಕೆ ಮಾಡಲು ಈ ಮಸೂದೆಯು ಅವಕಾಶ ನೀಡಿದೆ.

Edited By : Suman K
PublicNext

PublicNext

12/11/2024 02:15 pm

Cinque Terre

30.74 K

Cinque Terre

31