ವಾಷಿಂಗ್ಟನ್ : ಉಕ್ರೇನ್ ನಲ್ಲಿ ಯುದ್ಧ ಕೊನೆಗೊಳಿಸುವ ಕುರಿತಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಫ್ಲೋರಿಡಾದ ತಮ್ಮ ರೆಸಾರ್ಟ್ ನಿಂದ ವ್ಲಾಡಿಮಿರ್ ಪುಟಿನ್ ಗೆ ಕರೆ ಮಾಡಿರುವ ಅವರು, ಉಕ್ರೇನ್ನಲ್ಲಿ ಯುದ್ಧ ನಿಲ್ಲಿಸುವ ಕುರಿತಾಗಿ ಪುಟಿನ್ ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಇಬ್ಬರು ನಾಯಕರು ತಮ್ಮ ಫೋನ್ ಸಂಭಾಷಣೆಯಲ್ಲಿ, ಯುರೋಪ್ ಖಂಡದಲ್ಲಿ ಶಾಂತಿ ಸ್ಥಾಪಿಸುವುದು ಮತ್ತು ಉಕ್ರೇನ್ ನಲ್ಲಿ ಯುದ್ಧ ನಿಲ್ಲಿಸುವ ಕುರಿತು ಪರಿಹಾರೋಪಾಯಗಳನ್ನು ಶೀಘ್ರದಲ್ಲೇ ಚರ್ಚಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತನ್ನ ವಿಶೇಷ ವರದಿಯಲ್ಲಿ ತಿಳಿಸಿದೆ.
PublicNext
11/11/2024 02:12 pm