ಬಟ್ಟೆಗಳ ಮೇಲೆ ಹಳದಿ ಬೆವರು ಕಲೆಗಳು ಯಾವಾಗಲೂ ಮುಜುಗರ ಉಂಟು ಮಾಡುತ್ತದೆ,ವಾಷಿಂಗ್ ಮೆಷಿನ್ ವಾಷ್ ಅಲ್ಲಿ ಹೋಗದ ಈ ಮೊಂಡು ಕಲೆಗಳು ಹ್ಯಾಂಡ್ ವಾಷ್ ಗೂ ಬಗ್ಗುವುದೇ ಇಲ್ಲ. ಈ ಹಳದಿ ಕಲೆಗಳನ್ನು ಹೋಗಲಾಡಿಸಲು ಐದು ಟಿಪ್ಸ್ ಕೊಡುತ್ತೀವಿ ನೋಡಿ.
೧.ಕಲೆ ಇದ್ದ ಜಾಗಕ್ಕೆ ನೀರಿನೊಂದಿಗೆ ವಿನೆಗರ್ ಬೆರಸಿ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯಿರಿ
೨.ನೈಸರ್ಗಿಕ ಸ್ಟೇನ್ ಫೈಟರ್ ಅಂದ್ರೆ ಅದು ಅಡಿಗೆ ಸೋಡಾ, ಒಂದು ಚಮಚ ಅಡಿಗೆ ಸೋಡಾವನ್ನು ಎರಡು ಚಮಚ ತಣ್ಣೀರಿನ ಜೊತೆಗೆ ಬೆರೆಸಿ ಪೇಸ್ಟ್ ತಯಾರಿಸಿ. ಪೇಸ್ಟ್ ಅನ್ನು ಸ್ಟೇನ್‌ಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ
೩.Enzymes ಲಾಂಡ್ರಿ ಡಿಟರ್ಜೆಂಟ್‌ಗಳನ್ನು ಬಳಸಿ.
೪.ನೆನೆಸಿ ಮತ್ತು ಪುನರಾವರ್ತಿಸಿ, ಬಟ್ಟೆಯನ್ನು ರಾತ್ರಿ ಇಡಿ ನೆನೆಸಿ ಇಟ್ಟು ತೊಳೆಯಿರಿ ಮತ್ತೇ ಅದನ್ನು ಪುನರಾವರ್ತಿಸಿ
೫.ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಒಂದು ಚಮಚ ಟಾರ್ಟರ್ ಕೆನೆಯೊಂದಿಗೆ ಮಿಶ್ರಣ ಮಾಡಿ ಸ್ಟೈನ್ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ
PublicNext
13/11/2024 06:17 pm