ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸುತ್ತೇವೆ - ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ

ನವದೆಹಲಿ : ಅಯೋಧ್ಯೆಯ ರಾಮಮಂದಿರ ಹಾಗೂ ದೇಶದ ಪ್ರಮುಖ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ.

ನವೆಂಬರ್ 16 ಮತ್ತು 17ರಂದು ಈ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ಹಿಂಸಾತ್ಮಕ ಹಿಂದುತ್ವ ಸಿದ್ಧಾಂತದ ಜನ್ಮಸ್ಥಳ ಅಯೋಧ್ಯೆ, ಅದರ ಅಡಿಪಾಯವನ್ನು ನಾವು ಅಲುಗಾಡಿಸುತ್ತೇವೆ ಎಂಬ ಬೆದರಿಕೆಯೊಡ್ಡಿದ್ದಾನೆ. ಪ್ರತ್ಯೇಕ ಸಿಖ್ ರಾಜ್ಯದ ಉದ್ದೇಶದೊಂದಿಗೆ ಈ ಭಯೋತ್ಪಾದಕ ಪನ್ನುನ್ ನೇತೃತ್ವದ ಎಸ್​ಎಫ್​ಜೆ ಸಾಕಷ್ಟು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೆನಡಾದಲ್ಲಿ ಇದ್ದುಕೊಂಡು ಭಾರತ ವಿರೋಧಿ ಚಟುವಟಿಕೆ ನಡೆಸುವ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಭಾರತ ಪದೇ ಪದೇ ಕಳವಳ ವ್ಯಕ್ತಪಡಿಸಿದರೂ ಕೂಡ ಕೆನಡಾ ಯಾವುದೇ ಕ್ರಮ ಕೈಗೊಂಡಿಲ್ಲ.

Edited By :
PublicNext

PublicNext

11/11/2024 05:43 pm

Cinque Terre

20.59 K

Cinque Terre

10