ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ನಿವೃತ್ತಿ ಹೊಂದಿದ ಪೊಲೀಸ್ ಶ್ವಾನ ಸನ್ಮಾನಿಸಿ ಬೀಳ್ಕೊಟ್ಟ ಎಸ್ಪಿ ವಿಕ್ರಮ್ ಅಮಟೆ

ಚಿಕ್ಕಮಗಳೂರು: 10 ವರ್ಷ 07 ತಿಂಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ ‘ಪೃಥ್ವಿ’ ತನ್ನ ಸೇವೆಯಿಂದ ನಿವೃತ್ತಿ ಹೊಂದಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಪೃಥ್ವಿ ಗೆ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕ ವಿಕ್ರಂ ಅಮಟೆ ನಿವೃತ್ತಿ ಸನ್ಮಾನವನ್ನು ನೆರವೇರಿಸಿದ್ದಾರೆ.

02 ಜನವರಿ 2014 ರಂದು ಜನಿಸಿದ್ದ ಪೃಥ್ವಿ, 04 ಮಾರ್ಚ್ 2014 ರಲ್ಲಿ ಪೊಲೀಸ್ ಶ್ವಾನದಳಕ್ಕೆ "ಸ್ಪೋಟಕ ಪತ್ತೆ" ಶ್ವಾನವಾಗಿ ಸೇರ್ಪಡೆಯಾಗಿದ್ದು. ಅಂದಿನಿಂದ ಇಂದಿನವರೆಗೂ ರಾಜ್ಯದ ವಿವಿಧ ಬಂದೋಬಸ್ತ್ ಗಳಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿ ವಿ.ಐ.ಪಿ. ಮತ್ತು ವಿ.ವಿ.ಐ.ಪಿ. ಭದ್ರತೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದೆ.

ಜಿಲ್ಲೆಯು ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದೆ. ಅಷ್ಟೇ ಅಲ್ಲದೇ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ಕಂಚಿನ, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಕ್ಯಾಂಪ್‌ಗಳಲ್ಲಿ ಹಾಗೂ ವಿವಿಧ ಡಾಗ್ ಷೋ ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದೆ ಸುಧೀರ್ಘ ಸೇವೆ ನೀಡಿದ ಶ್ವಾನ ಇಂದು ನಿವೃತ್ತಿ ಹೊಂದಿದ್ದು ಅದನ್ನು ಆತ್ಮೀಯವಾಗಿ ಬಿಳ್ಕೊಡಲಾಗಿದೆ.

Edited By : Suman K
Kshetra Samachara

Kshetra Samachara

08/11/2024 01:47 pm

Cinque Terre

840

Cinque Terre

0

ಸಂಬಂಧಿತ ಸುದ್ದಿ