ಚಿಕ್ಕಮಗಳೂರು : 2024-2025ನೇ ಸಾಲಿಗೆ ರಾಜ್ಯ ಜವಳಿ ಉದ್ದಿಮೆಯಲ್ಲಿ ವೈಯಕ್ತಿಕ ಫಲಾನುಭವಿ/ಪಾಲುಗಾರಿಕೆ ಸಂಸ್ಥೆ/ಕಂಪನಿ/ಜವಳಿ ಸಹಕಾರ ಸಂಸ್ಥೆಯ ವತಿಯಿಂದ ಅತಿ ಸಣ್ಣ(ಎಸ್ ಎಂ ಇ) ಘಟಕಗಳನ್ನು ಪ್ರಾರಂಭಿಸಲು ಉತ್ತೇಜಿಸುವ ಸಲುವಾಗಿ ನೇಕಾರರ ಪ್ಯಾಕೆಜ್ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಜಿಲ್ಲೆಗೆ ವಿಶೇಷ ಘಟಕ ಯೋಜನೆಯಡಿ 01 ಮತ್ತು ಗಿರಿಜನ ಉಪಯೋಜನೆಯಡಿ 01 ಗುರಿಯನ್ನು ಕೇಂದ್ರ ಕಛೇರಿಯಿಂದ ನಿಗಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
12/11/2024 04:55 pm