ಚಿಕ್ಕಮಗಳೂರು: ಭಗವಂತನು ನೆಲೆಸಿರುವ ದೇವಾಲಯಗಳು ಮನುಷ್ಯನ ಮಾನಸಿಕ ಒತ್ತಡ ನಿವಾರಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾತ್ವಿಕ ಜೀವನದತ್ತ ಕೊಂಡೊಯ್ಯುವ ಪುಣ್ಯಕ್ಷೇತ್ರಗಳು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ತಾಲ್ಲೂಕಿನ ಉಂಡೇದಾಸರಹಳ್ಳಿಯಲ್ಲಿ ಶ್ರೀ ಲೋಕದಮ್ಮ, ಶ್ರೀ ಮುದಿಯಮ್ಮದೇವಿ ಹಾಗೂ ಶ್ರೀ ಒಂಟಿ ಕಲ್ ಭೂತಪ್ಪ
ದೇವರುಗಳ ನೂತನ ವಿಗ್ರಹಗಳ ಅಷ್ಟಬಂಧ,
ಪ್ರಾಣಪ್ರತಿಷ್ಟಾಪನೆ, ಕುಂಭಾಭಿಷೇಕ, ಶಿಖರ ಕಲಶೋಹಣ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಗವಂತನ ಗರ್ಭಗುಡಿಗೆ ಅರ್ಪಿಸುವ ಪೂಜಾಸಾಮಾಗ್ರಿಗಳು ಅಭಿಷೇಕದ ಬಳಿಕ ಪ್ರಸಾದವಾದಂತೆ, ಮಾನವ ಬದುಕಿನ ಜಂಜಾಟವನ್ನು ಬದಿಗಿರಿಸಿ ಮುಕ್ತ ಮನಸ್ಸಿನಿಂದ ದೇಗುಲಕ್ಕೆ ತೆರಳಿ ಹಿಂತಿರುಗಿದರೆ ಸಂಸ್ಕಾರವಂತ, ಮಾನವತಾವಧಿ ಹಾಗೂ ಮನುಷ್ಯತ್ವ ಹೊಂದುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ನಗರ ಸೇರಿದಂತೆ ಗ್ರಾಮೀಣ ಪ್ರದೇಶದ
ದೇವಾಲಯಗಳನ್ನು ಜೀರ್ಣೋದ್ದಾರ ಅಥವಾ ನೂತನ ವಾಗಿ
ನಿರ್ಮಿಸಿದರೆ ಸಾಲದು, ನಿರಂತರ ಪೂಜಾಕೈಂಕಾರ್ಯಗಳನ್ನು
ಕೈಗೊಳ್ಳುವುದು ಅತಿಮುಖ್ಯ. ಹೀಗಾಗಿ ಭಕ್ತಾಧಿಗಳು
ದೇವಾಲಯಕ್ಕೆ ತೆರಳಿ ಕೆಲಕಾಲ ಪ್ರಾರ್ಥನೆ ಸಲ್ಲಿಸಿದರೆ
ಹಿಂತಿರುಗಿದರೆ ಮನಸ್ಸಿನಲ್ಲಿ ಶಾಂತಿ ಲಭಿಸಲು ಸಾಧ್ಯ ಎಂಬುದು
ಅರಿಯಬೇಕು ಎಂದರು.
Kshetra Samachara
08/11/2024 07:11 pm