ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಚರಂಡಿ ಮೇಲೆ ಮುಚ್ಚಲ್ಪಟ್ಟಿದ್ದ ಗಂಗರ ಕಾಲದ ಪುರಾತನ ಶಿಲಾ ಶಾಸನ ಸಂರಕ್ಷಣೆ

ಚಿಕ್ಕಮಗಳೂರು: ಕನ್ನಡ ನಾಡಿನ ಖ್ಯಾತ ರಾಜ ವಂಶ ಗಂಗ ಅರಸರ ಕಾಲದ್ದು ಎನ್ನಲಾದ ಶಿಲಾ ಶಾಸನವು ಚಿಕ್ಕಮಗಳೂರು ನಗರದ ಹೊರವಲಯದ ಮೂರು ಮನೆಹಳ್ಳಿ ಗ್ರಾಮದ ಮನೆಯೊಂದರ ಸಮೀಪ ಚರಂಡಿ ಮೇಲೆ ಕಲ್ಲಿನಿಂದ ಮುಚ್ಚಲ್ಪಟ್ಟಿತ್ತು. ಇದನ್ನು ನಗರದ ಜಾನ್ ಸಚಿನ್ ಎಂಬುವವರು ಗಮನಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ಪೋಸ್ಟನ್ನು ಗಮನಿಸಿದ ಸ್ಮಿತಾ ಎಂಬುವವರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಕ್ಷಣ ಶಾಸನವನ್ನು ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು. ಇದೀಗ ನಗರಸಭೆಯ ಅಧ್ಯಕ್ಷರು, ಹಾಗೂ ಆಯುಕ್ತರು ಶಾಸನವನ್ನು ಸಂರಕ್ಷಣೆ ಮಾಡಿದ್ದಾರೆ.

ಮೂರುಮನೆ ಹಳ್ಳಿಯಲ್ಲಿ ಸಿಕ್ಕಿರುವ ಗಂಗರ ಕಾಲದ ಶಾಸನದಲ್ಲಿ ಭೂಮಿಯನ್ನು ದಾನವಾಗಿ ನೀಡಿದ್ದರ ಬಗ್ಗೆ ಉಲ್ಲೇಖವಿದೆ. ಇದರಲ್ಲಿ, ಕ್ರಿ.ಶ.899 ಅಕ್ಟೋಬರ್ 22, ಕಾರ್ತಿಕ ಮಾಸ ಪೂರ್ಣಿಮೆಯ ಸೋಮವಾರ ಮೂಲಾ ನಕ್ಷತ್ರದಂದು, ಗಂಗದೊರೆ ರಾಚಮಲ್ಲನು ಕಿರಿಯಮುಗುಳಿಯ ಪೆರ್ಮಾಡಿಗೌಡನಿಗೆ 200 ನೀರ್ಪಣ್ಯ ಅಂದರೆ ಭೂಮಿಯನ್ನು ದಾನವಾಗಿ ನೀಡಿದ್ದಾನೆ. ಇದಕ್ಕೆ ಸಾಕ್ಷಿಗಳು ನೀಲಬ್ಬೆ, ನರಸಿಂಗಯ್ಯ, ಕೇಸವಯ್ಯ, ಪೊನ್ನೆಓಜಾ, ಮಧುಕಮ್ಮೋಜ, ಬೆಣ್ನೆಗೇಸಿ, ಎರಿಯಮ್ಮ ಎಂಬ ಪದಗಳು ಕೆತ್ತಲಾಗಿವೆ.

Edited By : Suman K
PublicNext

PublicNext

08/11/2024 03:13 pm

Cinque Terre

11.78 K

Cinque Terre

0

ಸಂಬಂಧಿತ ಸುದ್ದಿ