ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮತ್ತೆ ಇಬ್ಬರು ಬಲಿ : ಸಿಎಂ ಒಮರ್ ಖಂಡನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ವಿಲೇಜ್ ಡಿಫೆನ್ಸ್ ಗ್ರೂಪ್‌ನ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕುಂಟ್ವಾರದ ಕಿಶ್ತ್ವಾರದ ಅರಣ್ಯ ಪ್ರದೇಶದಲ್ಲಿ ಭೀಕರವಾಗಿ ಹತ್ಯೆ ನಡೆದಿದೆ. ವಿಲೇಜ್ ಡಿಫೆನ್ಸ್ ಗ್ರೂಪ್‌ನ ಸದಸ್ಯರನ್ನು ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ.

ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಶಂಕಿತ ಉಗ್ರರ ದಾಳಿ ನಡೆದಿದೆ. ಅವರ ಮೃತದೇಹಗಳನ್ನು ಇನ್ನಷ್ಟೇ ಹೊರತೆಗೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೆ&ಕೆ ಸಿಎಂ ಒಮರ್ ಅಬ್ದುಲ್ಲಾ ಮತ್ತು ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಈ ದಾಳಿಯನ್ನು ಖಂಡಿಸಿದ್ದಾರೆ. ಇಂತಹ ಹಿಂಸಾಚಾರ, ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲ ಶಾಂತಿ ನೆಲೆಸಲು ಅಡ್ಡಿಯಾಗಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Edited By : Abhishek Kamoji
PublicNext

PublicNext

08/11/2024 07:28 am

Cinque Terre

111.63 K

Cinque Terre

8

ಸಂಬಂಧಿತ ಸುದ್ದಿ