ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಅಂಗೀಕರಿಸಿದ ನಿರ್ಣಯ ವಿರೋಧಿಸಿ ಬಿಜೆಪಿ ಶಾಸಕರು ವಿಧಾನ ಸಭೆ ಕಲಾಪದಲ್ಲಿ ಘೋಷಣೆ ಕೂಗಿದ್ದಾರೆ. ಇದರಿಂದಾಗಿ ಅಧಿವೇಶನದ ಮೂರನೇ ದಿನವಾದ ಇಂದು ಕೂಡ ಸದ್ದು-ಗದ್ದಲ ಮುಂದುವರೆಯಿತು.
ಪರಿಣಾಮ ವಿರೋಧ ಪಕ್ಷದ 12 ಸದಸ್ಯರು ಹಾಗೂ ಮತ್ತು ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಶೇಖ್ ಖುರ್ಷಿದ್ ಅವರನ್ನು ಸ್ಪೀಕರ್ ಆದೇಶದಂತೆ ಮಾರ್ಷಲ್ಗಳು ಹೊರಹಾಕಿದರು.
ಕೋಲಾಹಲ ಉಂಟಾಗುತ್ತಿದ್ದಂತೆ ಸ್ಪೀಕರ್ ಸದನವನ್ನು ಮುಂದೂಡಿದ್ದಾರೆ.
PublicNext
08/11/2024 05:33 pm