ಚನ್ನಪಟ್ಟಣ: ಮಾಜಿ ಸಂಸದ ಡಿಕೆ ಸುರೇಶ್ ಅವರಿಗೆ ಭಾಷಣ ಮಾಡಲು ಬಿಡದೆ ಕುಡುಕನೋರ್ವ ಕಾಟ ಕೊಟ್ಟ ಪ್ರಸಂಗ ಚನ್ನಪಟ್ಟಣದಲ್ಲಿ ನಡೆದಿದೆ.
ಚನ್ನಪಟ್ಟಣ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಮತ್ತು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಪರ ಪ್ರಮುಖ ನಾಯಕರು ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಚನ್ನಪಟ್ಟಣದ ಕಾಂಗ್ರೆಸ್ ಬಹಿರಂಗ ಪ್ರಚಾರದಲ್ಲಿ ಕುಡುಕನ ಕಿರಿಕ್ ಹೆಚ್ಚಾಗಿತ್ತು. ಮಾಜಿ ಸಂಸದ ಡಿಕೆ ಸುರೇಶ್ ಭಾಷಣದ ವೇಳೆ ಅವರಿಗೆ ಮಾತಾಡೋಕೂ ಬಿಡದೇ ಯೋಗೇಶ್ವರ್ ಗೆಲ್ಲಬೇಕು ಎಂದು ಕೂಗುತ್ತಿದ್ದನು. ಈ ವೇಳೆ ವ್ಯಕ್ತಿಗೆ ಸುಮ್ಮನೆ ಇರುವಂತೆ ಸಿಎಂ, ಡಿಸಿಎಂ ಗದರಿಸಿದರೂ ಸುಮ್ಮನಾಗದೇ ತನ್ನದೇ ಎಣ್ಣೆ ಏಟಿನ ಗುಂಗಲ್ಲಿ ತನ್ನದೇ ಭಾಷಣ ಮುಂದುವರೆಸಿದ್ದನು. ಆನಂತರ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ರು ಹಾಗೂ ಪೊಲೀಸರು ಸುಮ್ಮನಿಸಿದರು.
PublicNext
12/11/2024 11:03 pm