ಟಿ-ಶರ್ಟ್‌ಗಳಲ್ಲಿ ಭೂಗತ ಪಾತಕಿಗಳಾದ ಲಾರೆನ್ಸ್ ಬಿಷ್ಟೋಯಿ ಹಾಗೂ ದಾವೂದ್ ಇಬ್ರಾಹಿಂ ಭಾವಚಿತ್ರ ಬಳಸಿ ಮಾರಾಟ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಕಾಮರ್ಸ್ ಕಂಪನಿಗಳಾದ ಫ್ಲಿಪ್‌ಕಾರ್ಟ್, ಅಲಿ ಎಕ್ಸ್‌ಪ್ರೆಸ್, ಟೀಶಾಪರ್ ಹಾಗೂ ಎಟ್‌ಸೇ ಕಂಪನಿಗಳ ವಿರುದ್ಧ ಮಹಾರಾಷ್ಟ್ರ ಸೈಬರ್ ಪೊಲೀಸ್ ಎಫ್‌ಐಆರ್ ದಾಖಲಿಸಿದೆ.
ಟಿ-ಶರ್ಟ್‌ಗಳಲ್ಲಿ ಬಳಸಲಾಗಿರುವ ಈ ಇಬ್ಬರು ಪಾತಕಿಗಳು ದೇಶದ ವಿವಿಧ ರಾಜ್ಯಗಳಲ್ಲಿ ಕೊಲೆ, ಭಯೋತ್ಪಾದಕ ಚಟುವಟಿಕೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರಿಮಿನಲ್ ವ್ಯಕ್ತಿಗಳನ್ನು ವೈಭವೀಕರಿಸುವ ಉತ್ಪನ್ನಗಳಿಂದ ಸಮಾಜದ ಮೇಲೆ ಗಮನಾರ್ಹ ಅಪಾಯ ಉಂಟಾಗಲಿದೆ. ಇದರಿಂದ ಯುವ ಮನಸ್ಸುಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಈ ಕ್ರಮವು ಡಿಜಿಟಲ್ ನಿರ್ವಹಣಾ ಸುರಕ್ಷತಾ ನಿರ್ವಹಣೆಗೆ ಕಾಪಾಡಿಕೊಳ್ಳಲು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಪ್ರಚೋದಕ ವಿಷಯಗಳನ್ನು ಅಸ್ಥಿರಗೊಳಿಸುವುದನ್ನು ತಡೆಯುವುದಕ್ಕೆ ಮಹಾರಾಷ್ಟ್ರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಪೊಲೀಸ್ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಕಂಪನಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಅಡಿಗಳಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಗಳಲ್ಲಿ ಎಫ್‌ಐಆರ್ ದಾಖಲಿಸಲಾದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
08/11/2024 06:14 pm