ಬೆಂಗಳೂರು: ಬಿಎಂಟಿಸಿ ಚಾಲಕನ ಮೇಲೆ ಸವಾರ ಹಲ್ಲೆ ಪ್ರಕರಣ ಸಂಬಂಧಿಸಿ ಬಿಎಂಟಿಸಿ ಸಂಚಾರ ವ್ಯವಸ್ಥಾಪಕ ಮುಖ್ಯ ಜಿ.ಟಿ.ಪ್ರಭಾಕರ್ ರೆಡ್ಡಿ ಮಾಹಿತಿ ಕೊಟ್ಟಿದ್ದಾರೆ. ನಿನ್ನೆ ರಾತ್ರಿ 8 ಗಂಟೆಯ ವೇಳೆಗೆ ಘಟನೆ ನಡೆದಿದೆ. ಬೈಕ್ ಸವಾರ ಬಸ್‌ನ ಪಕ್ಕದಲ್ಲಿ ಬಂದಿದ್ದಾನೆ. ಬಸ್‌ಗೆ ಹತ್ತಿ ಚಾಲಕ ಇಮಾಮ್ ಸಾಬ್ ಮುರ್ತಜಾ ಮೇಲೆ ಹಲ್ಲೆ ಮಾಡಿದ್ದಾನೆ.
ಪ್ರಯಾಣಿಕರ ಸಹಕಾರದೊಂದಿಗೆ ಬಸ್‌ನ ಡೋರ್ ಕ್ಲೋಸ್ ಮಾಡಿದ್ದಾರೆ. ನಂತರ ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಡೋರ್ ಲಾಕ್ ಮಾಡಿ ಬಸ್‌ಅನ್ನು ಬ್ಯಾಟರಾಯನಪುರ ಠಾಣೆಗೆ ಕರೆದೊಯ್ದಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನ ಬ್ಯಾಟರಾಯನ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಓವರ್ ಟೇಕ್ ಮಾಡುವ ವಿಚಾರಕ್ಕೆ ಕಿರಿಕ್ ಆಗಿರಬಹುದು. ಏನೇ ಆದ್ರೂ ಮಾತಿನಲ್ಲಿ ಬಗೆಹರಿಸಿಕೊಳ್ಳಬೇಕು ವಿನಾ ಹಲ್ಲೆ ಮಾಡೋದು ಸರಿಯಲ್ಲ. ಕರ್ತವ್ಯದಲ್ಲಿರುವ ಚಾಲಕರಿಗೆ ಹಲ್ಲೆ ಮಾಡೋದು ಅಪರಾಧ ಎಂದಿದ್ದಾರೆ. ಘಟನೆ ವೇಳೆ ಬಸ್ ಅತಿ ವೇಗದಲ್ಲಿ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
PublicNext
11/11/2024 11:00 pm