ವಿಚ್ಛೇದನ ಇತ್ಯರ್ಥದಿಂದ ಅತೃಪ್ತಿಗೊಂಡ 62 ವರ್ಷದ ಫ್ಯಾನ್ ಎಂಬ ವ್ಯಕ್ತಿ ದಕ್ಷಿಣ ಚೀನಾದ ಝುಹೈನಲ್ಲಿ ಸೋಮವಾರ ಸಂಜೆ ಹೊರಾಂಗಣ ಕ್ರೀಡಾ ಕೇಂದ್ರದಲ್ಲಿ ವ್ಯಾಯಾಮ ಮಾಡುತ್ತಿದ್ದ ಜನಸಮೂಹದ ಮೇಲೆ ಕಾರು ಹರಿಸಿ ಮೂವತ್ತೈದು ಜನರ ಸಾವಿಗೆ ಕಾರಣವಾಗಿದ್ದಾನೆ, 43 ಜನರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಕ್ಸಿನ್ಜಿಯಾಂಗ್ನ ಪಶ್ಚಿಮ ಭಾಗಕ್ಕೆ 2014 ರಲ್ಲಿ ಭಯೋತ್ಪಾದನ ದಾಳಿ ನಡೆದಿದ್ದು ಅದರ ನಂತರ ಮೊನ್ನೆ ನಡೆದ ಈ ಘಟನೆಯಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದಾರೆ.ಚೀನಾದ ನಾಯಕ ಕ್ಸಿ ಜಿನ್ಪಿಂಗ್ ಚೀನಾ ಇತಿಹಾದಲ್ಲೇ ಅತ್ಯಂತ ಕೆಟ್ಟ ದಾಳಿ ಇದಾಗಿದ್ದು ಹಿಟ್-ಅಂಡ್-ರನ್ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕರೆ ಕೊಟ್ಟಿದ್ದಾರೆ.
ದುರ್ಘಟನೆ ನಂತರ ಆರೋಪಿಯನ್ನು ಪೊಲೀಸರು ಬಂಧಿಸಲು ಪ್ರಯತ್ನಿಸುತ್ತಿದ್ದಾಗ ಚಾಕುವಿನಿಂದ ಸ್ವಯಂ ಚುಚ್ಚುಕೊಂಡಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಈತ ಪ್ರಜ್ಙಾ ಹೀನನಾಗಿದ್ದು,ವಿಚಾರಣೆ ಸಾಧ್ಯವಾಗುತ್ತಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
PublicNext
13/11/2024 05:45 pm