ತಿರುವನಂತಪುರಂ: ಅಕ್ಟೋಬರ್ 31 ರಂದು ಮೊಬೈಲ್ ತೆರೆದು ನೋಡಿದರೆ, ಕೇರಳ ಕೇಡರ್ ನ ಐಎಎಸ್ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಅವರನ್ನು 'ಮಲ್ಲು ಹಿಂದೂ ಆಫೀಸರ್ಸ್' ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ವಿಶೇಷವೆಂದರೆ ಈ ಗ್ರೂಪ್ ರಚಿಸಿದ್ದೂ ಒಬ್ಬ IAS ಅಧಿಕಾರಿ!
ಕೇರಳ ಕೇಡರ್‌ನಲ್ಲಿ ಸೇವೆಯಲ್ಲಿರುವ ಕೇವಲ ಹಿಂದೂ ಅಧಿಕಾರಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ಅನ್ನು ಐಎಎಸ್ ಅಧಿಕಾರಿ ಕೆ ಗೋಪಾಲಕೃಷ್ಣನ್ ಬಳಸುತ್ತಿದ್ದ ಫೋನ್ ನಂಬರ್‌ನಿಂದ ರಚಿಸಲಾಗಿದೆ. ಇದಕ್ಕೆ ಅನೇಕ ಅಧಿಕಾರಿಗಳು ಇದು ಸೂಕ್ತವಲ್ಲ. ಅಧಿಕಾರಿಗಳು ಎತ್ತಿಹಿಡಿಯುವ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹಲವು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.
ವಾಟ್ಸಾಪ್ ಗ್ರೂಪ್ ರಚನೆಯಾದ ಒಂದು ದಿನದ ನಂತರ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. 'ಗ್ರೂಪ್ ಅಡ್ಮಿನ್' IAS ಅಧಿಕಾರಿ ಗೋಪಾಲಕೃಷ್ಣನ್ ತಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಧರ್ಮಾಧಾರಿತ ಸರಕಾರಿ ಅಧಿಕಾರಿಗಳ ವಾಟ್ಸ್‌ಆ್ಯಪ್ ಗ್ರುಪ್ ರಚಿಸಿದಕ್ಕಾಗಿ ಕೇರಳದ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣನ್‌ರನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
12/11/2024 08:39 am