ಕರೀಮ್ನಗರ: ಲಾರಿ ಕೆಳಗೆ ಮಹಿಳೆ ಸಿಲುಕಿದ್ದನ್ನು ಕಂಡ ಕೇಂದ್ರ ಸಚಿವ ಬಂಡಿ ಸಂಜಯ್ ಕೂಡಲೇ ತಮ್ಮ ಕಾರು ನಿಲ್ಲಿಸಿ ಮಹಿಳೆಯ ಜೀವ ರಕ್ಷಣೆಗೆ ನೆರವಾಗಲು ಸಹಾಯ ಮಾಡಿದ್ದಾರೆ.
ತೆಲಂಗಾಣದ ಕರೀಮ್ನಗರದ ಸಿಂಗಾಪುರ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಸಮೀಪದ ಕಲ್ಲೇದ ಗ್ರಾಮದ ದಿವ್ಯಶ್ರೀ ಎಂಬ ಮಹಿಳೆಯೊಬ್ಬರು ಲಾರಿ ಕೆಳಗೆ ಸಿಲುಕಿದ್ದಾರೆ. ಅದೇ ಮಾರ್ಗವಾಗಿ ತೆರಳುತ್ತಿದ್ದ ಕೇಂದ್ರ ಸಚಿವ ಬಂಡಿ ಸಂಜಯ್, ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿ ಮಹಿಳೆಯ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ಮಹಿಳೆಯ ಕೂದಲು ಲಾರಿಯ ಚಕ್ರದ ಕೆಳಗೆ ಸಿಲುಕಿದ್ದು ಕೂದಲು ಕತ್ತರಿಸಿ ಮಹಿಳೆಯನ್ನು ಲಾರಿ ಕೆಳಗಿನಿಂದ ಹೊರತರಲಾಗಿದೆ.
ಗಾಯಗೊಂಡ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಎಲ್ಲ ಚಿಕಿತ್ಸಾ ವೆಚ್ಚವನ್ನು ಕೇಂದ್ರ ಸಚಿವ ಬಂಡಿ ಸಂಜಯ್ ಸ್ವತಃ ಭರಿಸೋದಾಗಿ ಹೇಳಿದ್ದಾರೆ.
PublicNext
11/11/2024 04:51 pm