ಹಾವೇರಿ : ಕೆರೆಗೆ ಬಿದ್ದ ಹೋರಿ ರಕ್ಷಿಸಲು ಹೋದ ಯುವಕರಿಬ್ಬರು ನೀರು ಪಾಲಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಮಕರವಳ್ಳಿ ಗ್ರಾಮದಲ್ಲಿ ನಡೆದಿದೆ.
45 ವರ್ಷದ ನಾಗರಾಜ್ ಮಟ್ಟಿಮಣಿ ಹಾಗೂ 48 ವರ್ಷದ ಮಾಲತೇಶ್ ದಾಸನೂರು ಎಂಬಾತರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಗ್ರಾಮದ ಪಕ್ಕದಲ್ಲೇ ಇರುವ ಕೆರೆಗೆ ತೆರಳಿದ್ದಾಗ ಕೆರೆಗೆ ಹೋರಿ ಬಿದ್ದಿದ್ದು, ಅದನ್ನು ರಕ್ಷಿಸಲು ಹೋಗಿ ಬಳ್ಳಿಗಳಿಗೆ ಕಾಲು ಸಿಲುಕಿ
ಯುವಕರಿಬ್ಬರು ನೀರು ಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಆಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವಕರ ದೇಹಕ್ಕಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
PublicNext
07/11/2024 05:44 pm