ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಡಾಂಬರ್ ತಯಾರಿಕೆಯ ಟ್ಯಾಂಕ್‌ನಲ್ಲಿ ಬಿದ್ದು ಯುವಕ ಸಾವು

ಹಾವೇರಿ: ಡಾಂಬರ್ ಕಾಯಿಸಲು ಬಳಸುವ ಎಲ್ ಡಿ ಓ ಆಯಿಲ್ ಟ್ಯಾಂಕ್‌ನಲ್ಲಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.

ಆಯಿಲ್ ಟ್ಯಾಂಕ್‌ನಲ್ಲಿ ಬಿದ್ದು ಮೇಲೆದ್ದು ಬಾರದೆ ಒದ್ದಾಡಿ ಯುವಕ ಪ್ರಾಣ ಬಿಟ್ಟಿದ್ದಾನೆ. ಮೃತ ಯುವಕನನ್ನ 20 ವರ್ಷದ ಅಭಿಷೇಕ ಗೌಡಗೇರಿ ಹಾವೇರಿ ಜಿಲ್ಲೆ ರಾಣೆಬೇನ್ನೂರು ತಾಲೂಕಿನ ಕಾಕೋಳ ತಾಂಡಾದ ನಿವಾಸಿ ಎಂದು ಗುರುತಿಸಲಾಗಿದೆ.

ಆಯಿಲ್ ಟ್ಯಾಂಕ್‌ನ ವಾಲ್‌ನಲ್ಲಿ ಸಿಲುಕಿದ್ದ ಕಸ ತೆಗೆಯಲು ಎರಡು ಕಾಲುಗಳನ್ನ ಟ್ಯಾಂಕ್ ಒಳಗೆ ಬಿಟ್ಟು ಕಸ ತೆಗೆಯುವಾಗ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Edited By : Abhishek Kamoji
Kshetra Samachara

Kshetra Samachara

30/11/2024 06:07 pm

Cinque Terre

10.8 K

Cinque Terre

0