ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸುತ್ತಿದ್ದಂತೆ ಕಮಲಾ ಹ್ಯಾರಿಸ್ ಅವರು ಚುನಾವಣೆಯನ್ನುದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ರದ್ದುಪಡಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಲ್ಮಾ ಮಥರ್‌ನಲ್ಲಿ ಕಮಲಾ ಭಾಷಣ ನಿಗದಿಯಾಗಿತ್ತು.
ಒಂದೆಡೆ ಕಮಲಾ ಅವರು ತಮ್ಮ ಭಾಷಣವನ್ನು ರದ್ದುಪಡಿಸಿದ್ದರೆ, ಇತ್ತ ಡೊನಾಲ್ಡ್ ಟ್ರಂಪ್ ಅವರು ತಮ್ಮ ಬೆಂಬಲಿಗರನ್ನುದ್ದೇಶಿಸಿ ಫ್ಲೋರಿಡಾದಲ್ಲಿ ಮಾತನಾಡಲು ಸಜ್ಜಾಗಿದ್ದಾರೆ.
ಟ್ರಂಪ್‌ಗೆ ಆರಂಭಿಕ ಮುನ್ನಡೆ ದೊರೆಯುತ್ತಿದ್ದಂತೆ 'ಗೇಮ್, ಸೆಟ್ ಅಂಡ್ ಮ್ಯಾಚ್' ಎಂದು ಟ್ವೀಟ್ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್, ಇದೀಗ, 'ಅಮೆರಿಕವು ನಿರ್ಮಾಣ ಮಾಡುವವರಿಂದ ಕೂಡಿದ ರಾಷ್ಟ್ರ. ಶೀಘ್ರದಲ್ಲೇ, ನೀವು ನಿರ್ಮಾಣದಲ್ಲಿ ತೊಡಗಿಕೊಳ್ಳಲು ಮುಕ್ತರಾಗುತ್ತೀರಿ' ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
'ಬ್ಯಾಟಲ್‌ಗ್ರೌಂಡ್ ರಾಜ್ಯ'ಗಳು ಎನಿಸಿರುವ ಪೆನ್ಸಿಲ್ವೇನಿಯಾ, ಅರಿಜೋನಾ, ಜಾರ್ಜಿಯಾ, ಮಿಷಿಗನ್, ವಿಸ್ಕಾನ್‌ಸ್ಕಿನ್ ಮತ್ತು ನೆವಾಡದಲ್ಲಿ ಕಮಲಾ ಮುನ್ನಡೆ ಸಾಧಿಸಿದ್ದಾರೆ. ಉತ್ತರ ಕೆರೊಲಿನಾದಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ.
ಈ ರಾಜ್ಯಗಳು ಇಬ್ಬರ ಪಾಲಿಗೂ ನಿರ್ಣಾಯಕವಾಗಲಿವೆ.
ಅಮೆರಿಕದ 50 ರಾಜ್ಯಗಳಲ್ಲಿ ಈ ಏಳು ರಾಜ್ಯಗಳ ಮತದಾರರನ್ನು ಹೊರತುಪಡಿಸಿ ಹೆಚ್ಚಿನ ರಾಜ್ಯಗಳ ಮತದಾರರು ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ.
PublicNext
06/11/2024 01:29 pm