ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

US Elections : ಕಮಲಾ ಹ್ಯಾರಿಸ್ ಹಿಂದಿಕ್ಕಿದ ಡೊನಾಲ್ಡ್ ಟ್ರಂಪ್ ಮುಂದುವರೆದ ಮತ ಎಣಿಕೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆ ರೋಚಕ ಘಟ್ಟ ತಲುಪಿದೆ. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿನ ನಗೆ ಬೀರುವ ತವಕದಲ್ಲಿದ್ದಾರೆ. ಇತ್ತ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ತಮ್ಮ ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಹಲವಾರು ರಾಜ್ಯಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ.

ಡೊನಾಲ್ಡ್ ಟ್ರಂಪ್ ಅವರು ಅರ್ಕಾನ್ಸಾಸ್, ಒಕ್ಲಹೋಮ, ದಕ್ಷಿಣ ಕೆರೊಲಿನಾ, ಟೆನ್ನೆಸ್ಸೀ, ಫ್ಲೋರಿಡಾ, ಮಿಸ್ಸಿಸ್ಸಿಪ್ಪಿ, ವೆಸ್ಟ್ ವರ್ಜೀನಿಯಾ, ಇಂಡಿಯಾನಾ ಮತ್ತು ಕೆಂಟುಕಿ ರಾಜ್ಯಗಳಲ್ಲಿ ಮುಂದಿದ್ದಾರೆ. ಕಮಲಾ ಹ್ಯಾರಿಸ್‌ ಅವರು ಡೆಲವೇರ್, ನ್ಯೂಜೆರ್ಸಿ, ರೋಡ್ ಐಲ್ಯಾಂಡ್, ಕನೆಕ್ಟಿಕಟ್, ಮೇರಿಲ್ಯಾಂಡ್ ಮತ್ತು ವರ್ಮೊಂಟ್ ಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಯೊಬ್ಬರೂ ಕುತೂಹಲದಿಂದ ಅಮೆರಿಕಾದ ಸ್ವಿಂಗ್ 7 ರಾಜ್ಯಗಳಿಂದ ಹೊರಹೊಮ್ಮುವ ಫಲಿತಾಂಶದತ್ತ ಕಣ್ಣೀಟ್ಟಿದ್ದಾರೆ. ಇದರಿಂದ ಮುಂದಿನ ಅಮೆರಿಕಾ ಅಧ್ಯಕ್ಷರು ಯಾರಾಗುತ್ತಾರೆ ಎಂದು ನಿರ್ಧಾರವಾಗುತ್ತದೆ. ಅವುಗಳೆಂದರೆ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಮಿಚಿಗನ್, ಉತ್ತರ ಕೆರೊಲಿನಾ, ಜಾರ್ಜಿಯಾ, ಅರಿಜೋನಾ ಮತ್ತು ನೆವಾಡಾ ರಾಜ್ಯಗಳಾಗಿವೆ.

ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ ಇಂಡಿಯಾನಾ, ಕೆಂಟುಕಿ, ವೆಸ್ಟ್ ವರ್ಜೀನಿಯಾ, ಫ್ಲೋರಿಡಾ, ಅರ್ಕಾನ್ಸಾಸ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವರ್ಮೊಂಟ್, ಡೆಲವೇರ್ ಮತ್ತು ನ್ಯೂಜೆರ್ಸಿಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮುವ ನಿರೀಕ್ಷೆಯೊಂದಿಗೆ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮೊದಲ ಫಲಿತಾಂಶಗಳು ಬರಲಿವೆ.

Edited By : Nirmala Aralikatti
PublicNext

PublicNext

06/11/2024 01:20 pm

Cinque Terre

40.44 K

Cinque Terre

1

ಸಂಬಂಧಿತ ಸುದ್ದಿ