ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಚಿತ್ರಣವನ್ನೇ ಬದಲಿಸಬಲ್ಲ ಪ್ರಮುಖ ಏಳೂ ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಯಶಸ್ಸು ಸಾಧಿಸಿದ್ದಾರೆ.
'ಬ್ಯಾಟಲ್‌ಗ್ರೌಂಡ್ ರಾಜ್ಯ'ಗಳು ಎನಿಸಿರುವ ರಾಜ್ಯಗಳ ಪೈಕಿ ಉತ್ತರ ಕೆರೊಲಿನಾದಲ್ಲಿ ಗೆಲುವು ಸಾಧಿಸಿರುವ ಟ್ರಂಪ್, ಪೆನ್ಸಿಲ್ವೇನಿಯಾ, ಅರಿಜೋನಾ, ಜಾರ್ಜಿಯಾ, ಮಿಷಿಗನ್, ವಿಸ್ಕಾನ್‌ಸ್ಕಿನ್ ಮತ್ತು ನೆವಾಡದಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ.
ಈ ರಾಜ್ಯಗಳು ಇಬ್ಬರ ಪಾಲಿಗೂ ನಿರ್ಣಾಯಕವಾಗಲಿವೆ.
ಅಮೆರಿಕದ 50 ರಾಜ್ಯಗಳಲ್ಲಿ ಈ ಏಳು ರಾಜ್ಯಗಳ ಮತದಾರರನ್ನು ಹೊರತುಪಡಿಸಿ ಹೆಚ್ಚಿನ ರಾಜ್ಯಗಳ ಮತದಾರರು ಹಿಂದಿನ ಚುನಾವಣೆಗಳಲ್ಲಿ ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ಟ್ರಂಪ್ ಅವರು 266 ಕಮಲಾ 188 ಮತಗಳ ಮುನ್ನಡೆಯಲ್ಲಿದ್ದಾರೆ.
PublicNext
06/11/2024 01:02 pm