ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾದವರ ಟು ನಾಗಸಂದ್ರ ಮೆಟ್ರೋಗೆ ಗ್ರೀನ್ ಸಿಗ್ನಲ್

ಬೆಂಗಳೂರು: ಹಸಿರು ಮಾರ್ಗದ ನಾಗಸಂದ್ರ ದಿಂದ ಮಾದಾವರ ವರೆಗಿನ ವಿಸ್ತರಿತ ಮಾರ್ಗ ಸಂಚಾರಕ್ಕೆ ರೆಡಿಯಾಗಿದೆ. ಪ್ರಾಯೋಗಿಕವಾಗಿ ಇಂದು ಮಾಧವರ ಟು ನಾಗಸಂದ್ರ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ.

ಇಂದು ಮಾಧವರ ಟು ನಾಗಸಂದ್ರ ಮೆಟ್ರೋ ಟೆಸ್ಟ್ ರನ್ ಆಗಲಿದ್ದು ನಾಳೆಯಿಂದ ಸಾರ್ವಜನಿಕರಿಗೆ ಮೆಟ್ರೋ ಪ್ರಯಾಣ ಆರಂಭ ಆಗಲಿದೆ. 3.14 ಕೀ.ಮೀಟರ್ ವ್ಯಾಪ್ತಿಯ ವಿಸ್ತರಿತ ಮೆಟ್ರೋ ಮಾರ್ಗ ಇದಾಗಿದ್ದು ಮಾಧವರ, ಚಿಕ್ಕಬಿದರಕಲ್ಲು ಹಾಗೂ ಮಂಜುನಾಥ ನಗರ ಮೂರು ಹೊಸ ಸ್ಟೇಷನ್ ಇರಲಿವೆ. ಅಕ್ಟೋಬರ್ 4ರಂದೇ ಎಲ್ಲಾ ವಿಭಾಗಗಳಿಂದಲೂ ಕ್ಲಿಯರೆನ್ಸ್ ಸಿಕ್ಕಿತ್ತು. ಆದರೆ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿರಲಿಲ್ಲ.ಅದಾದ ನಂತರ ಅಕ್ಟೋಬರ್ 18ರಂದು ಕೇಂದ್ರಕ್ಕೆ ಪತ್ರ ಬರೆದು ಅನುಮತಿ ಕೋರಿತ್ತುಈಗ ಬಿಎಂಆರ್‌ಸಿಎಲ್ ಗೆ ವಿಸ್ತರಿತ ಮೆಟ್ರೋ ಸಂಚಾರಕ್ಕೆ ಅನುಮತಿ ಸಿಕ್ಕಿದೆ. ಈ ಹಿನ್ನೆಲೆ ಪ್ರಾಯೋಗಿಕವಾಗಿ ಮಾಧವರ ಟು ನಾಗಸಂದ್ರ ನಡುವೆ ಮೆಟ್ರೋ ಸಂಚಾರಕ್ಕೆ ಸಿದ್ಧತೆಯಾಗಿದೆ

Edited By : Nagaraj Tulugeri
PublicNext

PublicNext

06/11/2024 12:31 pm

Cinque Terre

29.03 K

Cinque Terre

0

ಸಂಬಂಧಿತ ಸುದ್ದಿ