ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರ ರಾಜಧಾನಿಯಲ್ಲಿ ಉಸಿರಾಡುವ ಗಾಳಿಯು ವಿಷಕಾರಿ, ಕೆಲವು ಶಾಲೆಗಳಿಗೆ ರಜೆ ಘೋಷಣೆ

ದೆಹಲಿಯಲ್ಲಿ ಯಾವಾಗಲೂ ಪೊಲ್ಯೂಷನ್‌ ನದ್ದೇ ಕಿರಿಕಿರಿ,ಈ ಬಾರಿ ಜನವರಿ ಒಂದರ ವರೆಗೆ ಪಟಾಕಿ ಬ್ಯಾನ್‌ ಮಾಡಿದ್ರೂ ಮಾಲಿನ್ಯ ಮಟ್ಟ ಅತೀವವಾಗಿ ಏರಿಕೆಯಾಗಿದೆ. ಜನ ಪಟಾಕಿ ಹೊಡೆದುದರ ಪರಿಣಾಮ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿದೆ. ರಾಷ್ಟ್ರ ರಾಜಧಾನಿಯನ್ನು ಹೊಗೆಯು ಆವರಿಸಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ರಜೆ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ. AQI ಎಂದರೆ ಏರ್ ಕ್ವಾಲಿಟಿ ಇಂಡೆಕ್ಸ್, ಇದು ಗಾಳಿಯು ಎಷ್ಟು ಸ್ವಚ್ಛವಾಗಿದೆ ಅಥವಾ ಕಲುಷಿತವಾಗಿದೆ ಹಾಗೂ ಎಷ್ಟು ಆರೋಗ್ಯಕರವಾಗಿದೆ ಎಂದು ಅಳೆಯುವ ಮಾಪನವಾಗಿದ್ದು ಇದರ ಪ್ರಕಾರ ರಾಜಧಾನಿ ನಗರದ ಹೆಚ್ಚಿನ ಭಾಗಗಳು 350 ಕ್ಕಿಂತ ಹೆಚ್ಚಿನ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಹೊಂದಿದೆ ಇದರ ಅರ್ಥ ಗಾಳಿ ಅತ್ಯಂತ ಕಲುಷಿತವಾಗಿದೆ ಎಂದು.

ಹೆಚ್ಚುತ್ತಿರುವ ಮಾಲಿನ್ಯ ಮತ್ತು ಅಪಾಯಕಾರಿ ವಾತಾವರಣದ ಕಾರಣ ದೆಹಲಿಯ ಬಹು ಶಾಲೆಗಳು ಇತ್ತೀಚೆಗೆ ರಜೆ ಘೋಷಿಸಿದೆ.ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಆನಂದ್ ವಿಹಾರ್‌ನಲ್ಲಿ AQI 380 ,ITO ನಲ್ಲಿ, ಇದು 6 ಗಂಟೆಗೆ 253,ಆರ್‌ಕೆ ಪುರಂನಲ್ಲಿ ಬೆಳಗ್ಗೆ 6 ಗಂಟೆಗೆ 346 ,IGI ಏರ್‌ಪೋರ್ಟ್ T3 ನಲ್ಲಿ, ಇದು 6 ಗಂಟೆಗೆ 342,ಮತ್ತು ದ್ವಾರಕಾ ಸೆಕ್ಟರ್ 8 ರಲ್ಲಿ, AQI ಬೆಳಿಗ್ಗೆ 7 ಗಂಟೆಗೆ 308 ಹೀಗೆ ಅತ್ಯಂತ ಕಳೆಪೆ ಗುಣಮಟ್ಟದ ಗಾಳಿ ಹೊಂದಿರುವುದು ವರದಿಯಾಗಿದೆ.

Edited By : Somashekar
PublicNext

PublicNext

05/11/2024 07:30 pm

Cinque Terre

20.84 K

Cinque Terre

1

ಸಂಬಂಧಿತ ಸುದ್ದಿ