ಬೆಂಗಳೂರು : ರೈತರ ಜಮೀನುಗಳಿಗೆ ವಕ್ಫ್ ಬೋರ್ಡ್ ನೋಟಿಸ್ ಖಂಡಿಸಿ ಇಂದು ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಕೆ ಆರ್ ಪುರಂ ತಾಲ್ಲೂಕು ಕಚೇರಿ ಎದುರು ವಕ್ಫ್ ಬೋರ್ಡ್ ನೋಟಿಸ್ ಖಂಡಿಸಿ ಪ್ರತಿಭಟನೆ ನಡೆಸಲಾಯ್ತು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ,ಕರ್ನಾಟಕದಲ್ಲಿ ಭಯೋತ್ಪಾದಕರು ಮತ್ತು ಮುಸ್ಲಿಂ ಮೂಲಭೂತವಾದಿಗಳು ಮಗುವಿನಂತೆ ಮಲಗಬಹುದು. ಅವರಿಗೆ ಯಾರು ಏನು ಮಾಡೋಕೆ ಆಗಲ್ಲ, ಭಯೋತ್ಪಾದಕರಿಗೆ ಪಾಕಿಸ್ತಾನಕ್ಕಿಂತ ಕರ್ನಾಟಕವೇ ಸೇಫ್ ಆಗಿದೆ ಎಂದು ಆರೋಪ ಮಾಡಿದರು. ವಕ್ಫ್ ನೋಟಿಸ್ ಕೊಡಲು ಕಾರಣೀಕರ್ತರಾದ ಸಚಿವ ಜಮೀರ್ ಅಹಮದ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ರು.
PublicNext
04/11/2024 02:02 pm