ನವೆಂಬರ್ 26, 2008 ಭಾರತದ ಇತಿಹಾಸದಲ್ಲಿ ಬಹಳ ಕರಾಳವಾದಂತ ದಿನ.ಮುಂಬೈನ ಐಕಾನಿಕ್ ತಾಜ್ ಹೋಟೆಲ್ ಮೇಲೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ದಾಳಿ ನಡೆಸಿರುವ ದಿನ.ಎಕೆ-47 ರೈಫಲ್‌ಗಳು ಮತ್ತು ಗ್ರೆನೇಡ್‌ಗಳದ್ದೇ ಸದ್ದು ಇಡೀ ಮುಂಬೈ ಗೆ ಕೇಳಿಸುವಂತೆ ಭೀಕರವಾಗಿತ್ತು.ಅಂದು ದಿವಂಗತ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದ ರತನ್ ಟಾಟಾ ಎಲ್ಲಿ ಇದ್ರೂ? ರತನ್ ಟಾಟಾ ತನ್ನ ಕೆಲಸವನ್ನು ಮುಗಿಸಿದ ನಂತರ ಎಂದಿನಂತೆ ದುರಂತದ ಮುನ್ಸೂಚನೆ ಇಲ್ಲದೇ ಆರಾಮವಾಗಿ ಮನೆಗೆ ತೆರಳಿದ್ದರು.ರಾತ್ರಿ 9:35ಕ್ಕೆ ರತನ್ ಟಾಟಾ ಅವರ ಫೋನ್ ಅನಿರೀಕ್ಷಿತವಾಗಿ ರಿಂಗಣಿಸಿತು. ಟಾಟಾ ಸನ್ಸ್‌ನ ಮಾಜಿ ಉಪಾಧ್ಯಕ್ಷ ನೋಶಿರ್ ಸೂನಾವಾಲಾ ಕರೆ ಮಾಡಿ "ತಾಜ್‌ನಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ? ಗುಂಡಿನ ದಾಳಿಗಳಿವೆ..."ಎಂಬ ಕಹಿ ಸುದ್ದಿಯನ್ನು ನೀಡಿದರು.ತಕ್ಷಣ ರತನ್ ಟಾಟಾ ಸ್ಥಳಕ್ಕೆ ಧಾವಿಸಿದ್ದರು.ಆದರೆ ಅವರಿಗೆ ಒಳಗೆ ಹೋಗಲು ಸಾಧ್ಯವಾಗಲಿಲ್ಲ.
ತಕ್ಷಣ ಹೊಟೇಲ್ ನ 24*7 ಕಾರ್ಯ ನಿರ್ವಹಿಸುವ ಫೋನಿಗೆ ಕರೆ ಮಾಡಿದರು ಆಗ ಯಾರು ಎತ್ತಿಕೊಳ್ಳದೇ ಹೋದಾಗ ಏನೋ ಗಂಭೀರವಾಗಿದೆ ಎನ್ನುವುದು ಸ್ಪಷ್ಟವಾಗಿತ್ತು. 10:45 PM ರ ಸುಮಾರಿಗೆ ಹೊಟೇಲ್ ತಲುಪಿದ್ದ ರತನ್ ಟಾಟಾ ಅವರಿಗೆ ಇದೇ ವೇಳೆ ಟಾಟಾ ಸಮೂಹದ ನಿರ್ದೇಶಕ ಆರ್.ಕೆ. ಕೃಷ್ಣಕುಮಾರ್ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು.ಆಗ ರತನ್ ಟಾಟಾ ಒಳಗೆ ಹೋಗಲು ಪ್ರಯತ್ನಿಸಿದರು ಭಯೋತ್ಪಾದಕರು ಟಾಟಾ ಅವರನ್ನು ಒತ್ತೆಯಾಳನ್ನಾಗಿ ವಶಪಡಿಸಿಕೊಂಡರೆ ಪರಿಸ್ಥಿತಿ ಇನ್ನಷ್ಟು ಬಿಗಾಡಾಯಿಸುವುದನ್ನು ಅರಿತು ಪೊಲೀಸರು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಅಧಿಕಾರಿಗಳು ತಡೆದು ನಿಲ್ಲಿಸಿದ್ದರು.ಟಾಟಾ ಅಪಾಯಗಳನ್ನು ಅರ್ಥಮಾಡಿಕೊಂಡು ಹಿಂದುರಿಗಿದರು.
PublicNext
05/11/2024 07:17 pm