ಒಂದು ಹೆಂಡತಿ ಜೊತೆ ಸಂಸಾರ ಮಾಡುತ್ತಾ ಆಕೆಯ ಬೇಕು ಬೇಡಗಳನ್ನು ಪೂರೈಸುವುದೇ ಕಷ್ಟ ಆದರೆ ಚೈನಾದಲ್ಲಿ ಕ್ಸಿಯೋಜನ್ ಅನ್ನುವ ವ್ಯಕ್ತಿ ಒಬ್ಬಳು ಮಡದಿ ನಾಲ್ಕು ಜನ ಪ್ರಿಯತಮೆಯರ ಜತೆ ಒಂದೇ ಮನೆಯಲ್ಲಿ ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದಾನೆ.ವಿಚಿತ್ರವೆಂದರೆ ಈ ಐದು ಜನಕ್ಕೂ ತಾವೂ ಒಂದೇ ಮನೆಯಲ್ಲಿ ಇರುವುದರ ಬಗ್ಗೆ ಗೊತ್ತೇ ಇರಲಿಲ್ಲವಂತೆ.ಇದು ಬರೀ ಚೀನಾ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ಬೆರಗುಗೊಳಿಸಿದೆ.ಕ್ಸಿಯೋಜುನ್ ತಾನು ಶ್ರೀಮಂತ ವ್ಯಕ್ತಿ ಎಂದು ಹೇಳಿ ಹೆಂಡತಿಗೆ ನಂಬಿಸಿ ಆನ್ ಲೈನ್ ನಿಂದ ಡುಬ್ಲಿಕೇಟ್ ವಸ್ತು ಖರೀದಿ ಮಾಡಿ ಕೊಟ್ಟು ವಂಚಿಸ್ತಾ ಇದ್ದನಂತೆ ದಂಪತಿಗೆ ಒಂದು ಮಗು ಕೂಡ ಇದೆ.ಗಂಡನ ಮೋಸ ಗೊತ್ತಾಗಿ ಮಡದಿ ಕ್ಸಿಯೋಜಿಯಾ ವಿಚ್ಛೇದನದ ಪಡೆದು ಮಗುವನ್ನು ತಾನೇ ಸಾಕುತ್ತಿದ್ದಾಳೆ.
ಹೆಂಡತಿ ಬಿಟ್ಟ ಕ್ಸಿಯೋಜನ್ ಮತ್ತೇ ಆನ್ ಲೈನ್ ನಲ್ಲಿ ಕ್ಸಿಯೋಹಾಂಗ್ ಅನ್ನುವ ಮಹಿಳೆ ಭೇಟಿ ಮಾಡಿ ಅವಳಿಂದ 140,000 ಯುವಾನ್ಗಳನ್ನು ಎರವಲು ಪಡೆದು ಮನೆ ಖರೀದಿಸಿ ಮತ್ತೇ ಅಲ್ಲಿ ನಾಲ್ಕು ಜನರೊಂದಿಗೆ ವಾಸಿಸಲು ಆರಂಭ ಮಾಡುತ್ತಾನೆ.ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ಕ್ಸಿಯಾಮಿನ್ ಮತ್ತು ಕ್ಸಿಯಾಕ್ಸಿನ್ ಮತ್ತು ನರ್ಸ್ ಕ್ಸಿಯಾಲನ್ ಜೊತೆ ಡೇಟಿಂಗ್ ಮುಂದುವರಿಸಿ ಅವರಿಂದಲೂ ಒಂದಷ್ಟು ಹಣ ಪಡೆದು ಹೆಣ್ಣು ಭಾಕನಂತೆ ಎಲ್ಲರಿಗೂ ಮೋಸ ಮಾಡುತ್ತಿದ್ದ ಈತನ ಮೇಲೆ ಅನುಮಾನ ಬಂದ ಕ್ಸಿಯಾಕ್ಸಿನ್ ಎಂಬ ಡೇಟಿಂಗ್ ಮಾಡುತ್ತಿದ್ದ ಹುಡುಗಿ ಬ್ಯಾಗ್ ತುಂಬಾ ಪೇಕ್ ಕರೆನ್ಸಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿ ಅರೆಸ್ಟ್ ಮಾಡಿಸ್ತಾಳೆ ಆಗ ಈತನ ಎಲ್ಲಾ ನಿಜ ಬಣ್ಣ ಬಯಲಾಗುತ್ತದೆ.ಕೇಳಲು ಇದು ಸಿನಿಮಾ ಸ್ಟೋರಿ ರೀತಿ ಇದ್ದರೂ ಇದು ನೈಜ ಘಟನೆಯಾಗಿದೆ.
PublicNext
06/11/2024 07:13 pm