ಇಂದು ನವೆಂಬರ್ 5 ವಿರಾಟ್ ಕೊಹ್ಲಿ ಜನುಮ ದಿನ. ಅನುಷ್ಕಾ ಶರ್ಮ ತನ್ನ ಪತಿ ವಿರಾಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಬರ್ತ್ ಡೇ ವಿಶ್ ಮಾಡಿದ್ದಾರೆ.ಇಬ್ಬರು ಮಕ್ಕಳಾದ ಅಕಾಯ್ ಮತ್ತು ವಾಮಿಕಾ ಅವರನ್ನು ವಿರಾಟ್ ಕೈಯಲ್ಲಿ ಹಿಡಿದಿರುವ ಫೊಟೋದಲ್ಲಿ ಮಕ್ಕಳ ಫೋಟೋಗೆ ಎಮೋಜಿಗಳನ್ನು ಹಾಕಿ ಮರೆಮಾಚಿ ಪೋಸ್ಟ್ ಮಾಡಿ ಯಾವುದೇ ಕ್ಯಾಪ್ಶನ್ ನೀಡದೆ ಕೇವಲ ಹಾರ್ಟ್ ಸಿಂಬಲ್ ಹಾಕಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.ದಂಪತಿ ತಮ್ಮ ಮಕ್ಕಳನ್ನು ಮಾಧ್ಯಮದ ಕಣ್ಣಿಂದ ಯಾವಾಗಲೂ ಹೊರಗಿಡಲು ಇಷ್ಟ ಪಡುತ್ತಾರೆ, ಪಾಪರಾಜಿಗಳಿಗೂ ಮಗುವಿನ ಫೊಟೋ ಕ್ಲಿಕ್ ಮಾಡದಂತೆ ಯಾವಾಗಲೂ ವಿನಂತಿಸುತ್ತಲೇ ಇರುತ್ತಾರೆ.ಇವರಿಬ್ಬರು ಕೆಲವೊಂದಿಷ್ಟು ಸಮಯ ಲಂಡನ್ ನಲ್ಲಿ ವಾಸವಿದ್ದರು.ಈ ಬಾರಿ ಬರ್ತ್ ಡೇ ಯನ್ನು ಭಾರತದ ರೆಸ್ಟೊರೆಂಟ್ ಚೈನ್ ಒನ್8 ಕಮ್ಯೂನ್ನಲ್ಲಿ ಸಣ್ಣದಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
PublicNext
05/11/2024 07:31 pm