ಮಲಯಾಳಂ ಮತ್ತು ತಮಿಳು ಟಿವಿ ಧಾರಾವಾಹಿಗಳಲ್ಲಿ ನೆಗೆಟಿವ್ ರೋಲ್ ಮಾಡಿ ಪ್ರಖ್ಯಾತಿ ಗಳಿಸಿರುವ ನಟಿ ದಿವ್ಯಾ ಶ್ರೀಧರ್ ಮತ್ತು ಗಿರೀಶ್ ವೇಣುಗೋಪಾಲ್ ಗುರುವಾಯೂರ್ ದೇವಸ್ಥಾನದಲ್ಲಿ ಮದುವೆಯಾಗಿ, ಕೈ ಕೈ ಹಿಡಿದುಕೊಂಡು ತಮ್ಮ ಮಕ್ಕಳ ಜೊತೆ ದೇವಸ್ಥಾನದ ಹೊರಗೆ ಬಂದಿರುವ ಫೊಟೋ ವೀಡಿಯೋಗಳು ನೋಡಗರಿಗೆ ಅಚ್ಚರಿ ಮೂಡಿಸಿದೆ. ಅದರಲ್ಲೇನಿದೆ ವಿಶೇಷ ಅಂತಾನಾ? ದಿವ್ಯಾ ಅವರಿಗೆ ೩೮ ವರ್ಷ ಹಾಗೂ ಗುರುವಾಯೂರ್ ಅವರಿಗೆ ೪೯ ವರ್ಷ ಕೇವಲ ತನಗಿಂತ ಹನ್ನೊಂದು ವರ್ಷ ಹಿರಿಯ ನಟನನ್ನು ಮದುವೆಯಾಗಿದ್ದಕ್ಕಾಗಿ ದಿವ್ಯಾ ಅವರನ್ನು ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ.ಇದೊಂದು ಪ್ರೇಮ ವಿವಾಹವಾಗಿದೆ.ದಿವ್ಯಾ ಶ್ರೀಧರ್ ಮತ್ತು ಕ್ರಿಸ್ ವೇಣುಗೋಪಾಲ್ ಮೊದಲು ಭೇಟಿಯಾದದ್ದು ಟಿವಿ ಶೋ 'ಪಟ್ರಮಟ್ಟು' ಸೆಟ್ನಲ್ಲಿ ನಂತರ ಇವರಿಬ್ಬರ ಮಧ್ಯೆ ಪ್ರೀತಿಯಾಗಿ ಮದುವೆಯಲ್ಲಿ ಕೊನೆಗೊಂಡಿದೆ.ದಿವ್ಯಾಗೆ ಇದು ಎರಡನೇ ಮದುವೆ. ಆಕೆಗೆ ತನ್ನ ಮೊದಲ ಪತಿಯಿಂದ ಇಬ್ಬರು ಮಕ್ಕಳಿದ್ದಾರೆ ಹಾಗೂ ಈ ಎರಡನೇ ಮದುವೆಗೆ ಆಕೆ ತನ್ನ ಮಕ್ಕಳಿಂದ ಒಪ್ಪಿಗೆ ಪಡೆದಿದ್ದಾಳಂತೆ.
PublicNext
04/11/2024 07:36 pm