ತಮಿಳು ಚಿತ್ರ ಪರಿಯೆರುಮ್ ಪೆರುಮಾಳ್ ನಲ್ಲಿ ನಟಿಸಿದ್ದ ಪ್ರೀತಿಯ ನಾಯಿ ಕರುಪ್ಪಿ, ದೀಪಾವಳಿಯಂದು ತಿರುನಲ್ವೇಲಿಯಲ್ಲಿ ನಿಧನವಾಗಿದೆ.ದೀಪಾವಳಿಯ ಪಟಾಕಿ ಶಬ್ಧಕ್ಕೆ ಬೆದರಿದ ನಾಯಿ ಓಡಿ ಹೋಗಿ ಬಸ್ ಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದೆ.ಪರಿಯೇರುಂ ಪೆರುಮಾಳ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ಕತೀರ್ ನಾಯಿ ಜೊತೆಗಿನ ತನ್ನ ಫೊಟೋ ಹಂಚಿಕೊಂಡು ಸಾವಿಗೆ ಸಂತಾಪ ಸೂಚಿಸಿದ್ದಾರೆ.ಸಿನಿಮಾದಲ್ಲಿ ಕೂಡ ಕರುಪ್ಪಿ ಇದೇ ರೀತಿ ಅಂತ್ಯ ಕಾಣುತ್ತದೆ.ರೈಲ್ವೇ ಟ್ರ್ಯಾಕ್ ಗೆ ನಾಯಿಯನ್ನು ಕಟ್ಟಿ ಹಾಕಿ ರೈಲು ಹರಿದು ತುಂಬಾ ನೋವಿನಿಂದ ಸಾವನ್ನಪ್ಪುತ್ತದೆ. ನಿಜ ಜೀವನದಲ್ಲೂ ಕರುಪ್ಪಿ ಇದೇ ರೀತಿ ಸಾವನ್ನಪ್ಪಿದ್ದು ದುರಂತವೇ ಸರಿ. ನಿರ್ದೇಶಕ ಪಾ ರಂಜಿತ್ ಅವರ ನಿರ್ಮಾಣ ಸಂಸ್ಥೆ, ನೀಲಂ ಪ್ರೊಡಕ್ಷನ್ಸ್, ಕರುಪ್ಪಿಯ ಕಪ್ಪು-ಬಿಳುಪು ಫೊಟೋ ಹಂಚಿಕೊಂಡು "ವಿದಾಯ ಕರುಪ್ಪಿ,ನೀನು ಶಾಶ್ವತವಾಗಿ ನಮ್ಮೆಲ್ಲರ ನೆನಪಲ್ಲಿ ಇರುತ್ತೀಯಾ" ಎಂದು ಭಾವುಕವಾಗಿ ಬರೆದಿದ್ದಾರೆ.ಪರಿಯೆರುಂ ಪೆರುಮಾಳ್ ಗ್ರಾಮೀಣ ಭಾಗದಲ್ಲಿ ಜಾತಿ ಆಧಾರಿತ ಹಿಂಸೆಯನ್ನು ಎತ್ತಿ ತೋರಿಸುವ ಚಿತ್ರವಾಗಿದೆ.ಕರುಪ್ಪಿ ದಾರುಣ ಸಾವು ಚಿತ್ರದ ಅಭಿಮಾನಿಗಳಿಗೆ, ಕರುಪ್ಪಿ ಹತ್ತಿರದಿಂದ ಬಲ್ಲವರಿಗೆ ತುಂಬಲಾರದ ನಷ್ಟವಾಗಿದೆ.
PublicNext
06/11/2024 03:37 pm