ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜರದ ಪಕ್ಷಿಯಂತಿದೆ ಮಿಲಿಯನೇರ್ ಮಡದಿ ಬದುಕು...VIdeo Viral

ದುಬೈ : ಮದುವೆಯ ನಂತರದ ಜೀವನದಲ್ಲಿ ಕೆಲವೊಮ್ಮೆ ಷರತ್ತುಗಳನ್ನು ವಿಧಿಸಿದರೆ ಸಂಬಂಧದಲ್ಲಿ ಬಿರುಕು ಮೂಡಬಹುದು. ಸದ್ಯ ಸಾಮಾಜಿಕ ಜಾಲತಾಣಲದ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಆ ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಗಂಡನ ಹಾಕಿರುವ ಕಠಿಣ ನಿಯಮಗಳನ್ನು ಬಹಿರಂಗಪಡಿಸಿದ್ದಾರೆ. ದುಬೈ ಮಹಿಳೆಯ ಮಹಿಳೆಯ ಹೆಸರು ಸೌದಿ ಅಲ್ ನಡಕ್.

ಸೌದಿ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಐಷಾರಾಮಿ ಜೀವನಶೈಲಿಯ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಆಕೆ ದುಬೈನಲ್ಲಿರುವ ನನ್ನ ಮಿಲಿಯನೇರ್ ಪತಿ ನನಗೆ ಕಠಿಣ ನಿಯಮಗಳನ್ನು ಮಾಡಿದ್ದಾರೆ ಎಂದು ಬರೆದುಕೊಂಡು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಮಹಿಳೆ ತನ್ನ ಪತಿಯ ಆಯ್ಕೆಯ ಬಗ್ಗೆಯೂ ಹೇಳುತ್ತಾ, ಬ್ಯಾಗ್‌ಗಳು ಯಾವಾಗಲೂ ಶೂ/ಸ್ಯಾಂಡಲ್‌ಗಳಿಗೆ ಹೊಂದಿಕೆಯಾಗವುಂತಿರಬೇಕು, ಅದನ್ನು ನನ್ನ ಪತಿ ಇಷ್ಟಪಡುತ್ತಾರೆ. ಮತ್ತು ನನಗೆ ಕೆಲಸ ಮಾಡಲು ಅವಕಾಶ ಇಲ್ಲ, ಏಕೆಂದರೆ ಎಲ್ಲಾ ಖರ್ಚು-ವೆಚ್ಚವನ್ನು ಪತಿಯೇ ಭರಿಸುತ್ತಾರೆ ಎಂದು ಕಾರಣ ಹೇಳಿದ್ದಾಳೆ. ಆಕೆ ಮನೆಯಲ್ಲಿ ಅಡುಗೆ ಕೂಡ ಮಾಡುವುದಿಲ್ಲವಂತೆ. ಗಂಡ ಹೆಂಡತಿ ಇಬ್ಬರೂ ಹೊರಗೆ ಊಟ ಮಾಡುತ್ತಾರೆ ಎಂದು ಹೇಳಿದ್ದಾರೆ.

ಆಕೆಯ ಪತಿ ಪುರುಷರೊಂದಿಗೆ ಸ್ನೇಹ ಬೆಳೆಸಬೇಡಿ ಎಂದು ಸಲಹೆ ನೀಡಿದ್ದಾರೆ. ಇಬ್ಬರಿಗೂ ಪರಸ್ಪರರ ಪಾಸ್‌ವರ್ಡ್‌ಗಳು ಗೊತ್ತು ಎಂದು ತಿಳಿಸಿದ್ದಾಳೆ. ಅಲ್ಲದೆ ಪ್ರತಿದಿನ ವೃತ್ತಿಗೆ ಹೋಗುವಂತೆ ನಾನು ಹೇರ್​ಸ್ಟೈಲ್​ ಮತ್ತು ಮೇಕಪ್​​ ಮಾಡಿಕೊಂಡು ರೆಡಿಯಾಗಬೇಕೆಂದು ನನ್ನ ಪತಿ ನಿರೀಕ್ಷಿಸುತ್ತಾರೆ ಎಂದು ತಿಳಿಸಿದ್ದಾಳೆ.

ಸದ್ಯ ದಂಪತಿಯ ಐಷಾರಾಮಿ ಜೀವನ ಶೈಲಿಯ ಹೊರತಾಗಿಯೂ, ಅವರ ಸಂಬಂಧಕ್ಕೆ ನೆಟ್ಟಿಗರು ಮಿಶ್ರಪ್ರತಿಕ್ರಿಯೆ ನೀಡುತ್ತಿದ್ದಾರೆ.

Edited By : Nirmala Aralikatti
PublicNext

PublicNext

03/11/2024 08:46 am

Cinque Terre

131.67 K

Cinque Terre

1

ಸಂಬಂಧಿತ ಸುದ್ದಿ