ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ರೈತರ ಹೋರಾಟಕ್ಕೆ ಪ್ರಹ್ಲಾದ್ ಜೋಶಿ ಬೆಂಬಲ- ಸಚಿವ ಸಂಪುಟದಿಂದ ಜಮೀರ್ ಕಿತ್ತೊಗೆಯಲು ಆಗ್ರಹ

ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ವಕ್ಫ್ ಆಸ್ತಿ ವಿಚಾರವಾಗಿ ರೈತರ ಅಹೋರಾತ್ರಿ ಧರಣಿ ನಡೆದಿದ್ದು,

ಧರಣಿ ಸ್ಥಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ರೈತರ ಜಮೀನು, ಮಠದ ಆಸ್ತಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ವಿಷಯ ಕುರಿತು ರೈತರೊಂದಿಗೆ ಚರ್ಚಿಸಿದ ಅವರು,

16 ಸಾವಿರ ಎಕರೆ ಭೂಮಿಯನ್ನು ವಿಜಯಪುರದಲ್ಲಿ ವಕ್ಫ್ ಆಗಿ ಪರಿವರ್ತಿಸಿದ್ದಾರೆ. ತುಷ್ಟೀಕರಣ ಸಹಿಸೋದಿಲ್ಲ, ವಕ್ಫ್ ಕಾನೂನಿನ ಅನ್ ಲಿಮಿಟೆಡ್ ಪವರ್ ತೆಗೆದು‌ ಹಾಕಬೇಕು.

ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್, ಪ್ರತಿ ಜಿಲ್ಲೆಗೆ ಹೋಗಿ ವಕ್ಫ್ ಅದಾಲತ್ ಮಾಡಿದ್ದಾನೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾನೆ. ರಾಜ್ಯದಲ್ಲಿ ಕೋಮು ದ್ವೇಷ ಹರಡುತ್ತಿರುವ, ಇಸ್ಲಾಮೀಕರಣ ಮಾಡಲು ಮುಂದಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ನನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಹರಿಹಾಯ್ದರು. ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ

Edited By : Suman K
PublicNext

PublicNext

30/10/2024 07:20 pm

Cinque Terre

45.92 K

Cinque Terre

3

ಸಂಬಂಧಿತ ಸುದ್ದಿ