ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ಸಂಭ್ರಮದ ಎಳ್ಳ ಅಮವಾಸ್ಯೆ ಆಚರಣೆ : ತೋಟದಲ್ಲಿ ರೀಲ್ಸ್ ಮಾಡಿ ಗಮನ ಸೆಳೆದ ಸುಂದರಿಯರು...

ವಿಜಯಪುರ : ಜಿಲ್ಲೆಯಾದ್ಯಂತ ರೈತರು ಸೋಮವಾರ ಎಳ್ಳ ಅಮವಾಸ್ಯೆಯನ್ನ ಸಡಗರ ಸಂಭ್ರಮದಿಂದ ಆಚರಿಸಿದರೇ ಇಲ್ಲಿ ಕೆಲ ಸುಂದರಿಯರು ತೋಟದಲ್ಲಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ವಿಜಯಪುರ ನಗರದ ಪ್ರಗತಿ ಪರ ರೈತ ಶಶಿ ಗಂಗನಹಳ್ಳಿಯವರ ತೋಟದಲ್ಲಿ ಎಳ್ಳ ಅಮವಾಸ್ಯೆ ಅಂಗವಾಗಿ ರೈತ ಶಶಿ ತಮ್ಮ ಕುಟುಂಬ ಸದಸ್ಯರೊಂದಿಗೆ ತೋಟದಲ್ಲಿ ಬೆಳೆದು ನಿಂತ ಬೆಳೆಗೆ ಹಾಗೂ ಭೂತಾಯಿಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಚೆರಗ ಚೆಲ್ಲಿ ಸಂಭ್ರಮಿಸಿದರು.

ಇನ್ನೂ ಎಳ್ಳ ಅಮವಾಸ್ಯೆ ಅಂಗವಾಗಿ ತೋಟಕ್ಕೆ ಆಗಮಿಸಿದ ಸ್ನೇಹಿತರು ಚೆರಗ ಸಂಭ್ರಮದಲ್ಲಿ ಭಾಗಿಯಾದರು.

ಇನ್ನೂ ಕೆಲ ಮಹಿಳಾ ಮಣಿಗಳು ತೋಟದಲ್ಲಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದರು. ಒಟ್ಟಾರೆಯಾಗಿ ಅಧುನಿಕ ಭರಾಟೆಯಲ್ಲಿ ಸದಾ ಕೆಲಸದ ಒತ್ತಡದಲ್ಲಿದ್ದ ಸಿಟಿ ಜನತೆ ಎಳ್ಳ ಅಮವಾಸ್ಯೆ ನೆಪದಲ್ಲಿ ಹೊಲಗಳಿಗೆ ತೆರಳಿ ಪ್ರಕೃತಿಯ ಮಡಿಲಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು.

-ಮಂಜು ಕಲಾಲ ಪಬ್ಲಿಕ ನೆಕ್ಸ್ಟ ವಿಜಯಪುರ

Edited By : Shivu K
PublicNext

PublicNext

31/12/2024 01:33 pm

Cinque Terre

45.43 K

Cinque Terre

1