ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್ ರಾಜ್‍ಕುಮಾರ್ ಪುಣ್ಯತಿಥಿ - ಹುಬ್ಬಳ್ಳಿಯಲ್ಲಿ ಮಟನ್ ಊಟ ಇಟ್ಟು ಅಭಿಮಾನಿಗಳ ಕಣ್ಣೀರು

ಹುಬ್ಬಳ್ಳಿ: ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ, ಗಂಡು ಮೆಟ್ಟಿನ ನಾಡು ಹುಬ್ಬಳ್ಳಿ ಚನ್ನಮ್ಮ ಸರ್ಕಲ್ ಬಳಿ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ, ಅಪ್ಪು ಭಾವಚಿತ್ರಕ್ಕೆ ಮಟನ್ ಕಿಮಾ, ಮಟನ್ ಮಸಾಲಾ, ಚಿಕನ್ ಬಿರಿಯಾನಿ ಇಟ್ಟು ಪುಣ್ಯ ಸ್ಮರಣೆ ಮಾಡಿದರು.

ಈ ಪುಣ್ಯತಿಥಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಭಾಗಿಯಾಗಿದ್ದು, ಅಪ್ಪು ಅಭಿಮಾನಿಗಳು ಬರೋಬ್ಬರಿ 10 ಕ್ವಿಂಟಲ್ ಚಿಕನ್ ಬಿರಿಯಾನಿ ಮಾಡಿ ಸಾರ್ವಜನಿಕರಿಗೆ ಹಂಚಿದರು. ರಾಜರತ್ನನ ಅಗಲಿಕೆಯಿಂದ ಅಭಿಮಾನಿಗಳು ಕಣ್ಣೀರಾದರು.

Edited By : Suman K
Kshetra Samachara

Kshetra Samachara

29/10/2024 08:56 pm

Cinque Terre

70.62 K

Cinque Terre

3

ಸಂಬಂಧಿತ ಸುದ್ದಿ