ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೀನಬಂಧು ಕಾಲೋನಿಯ ನಿವಾಸಿಗಳ ಸಂಘದಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಂದು ಮೌನ ಪ್ರತಿಭಟನೆ ನಡೆಸಲಾಯಿತು.

ದೀನಬಂಧು ಗೃಹ ನಿರ್ಮಾಣ ಸಹಕಾರಿ ಸಂಘ ನಿಯಮಿತವು ದೀನಬಂಧು ಕಾಲನಿ, ಕಾರವಾರ ರೋಡ, ಹುಬ್ಬಳ್ಳಿ ಸಂಘದ ಮೂಲ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸದಸ್ಯರು ನಿವೇಶನ ಹೊಂದುವ ಉದ್ದೇಶದಿಂದ ಈ ಸಂಘವನ್ನು 1950 ರಲ್ಲಿ ಸ್ಥಾಪನೆ ಮಾಡಲಾಯಿತು. ಆದರೆ ಈಗ 1993ರಲ್ಲಿ ಆಡಳಿತ ಅಧಿಕಾರಿ ಅನಧಿಕೃತವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರದ 491 ಜನ ಸದಸ್ಯರನ್ನು ಯಾವುದೇ ಕಾನೂನು ರೀತಿಯ ಅಧಿಕಾರ ಇಲ್ಲದೆ ಸದಸ್ಯರನ್ನಾಗಿ ಸೇರಿಸಿ, ನಂತರದಲ್ಲಿ 2013 ರಲ್ಲಿ ಸಂಘದ ಮೂಲ ಬೈಲಾವನ್ನು ಅನಧಿಕೃತವಾಗಿ ತಿದ್ದುಪಡಿ ಮಾಡಿಕೊಂಡು ಮೂಲ ಸದಸ್ಯರ ಹಕ್ಕುಗಳನ್ನು ಅಲ್ಲಗಳೆದು ತೊಂದರೆ ಮಾಡಿದ್ದು, ಈ ಬಗ್ಗೆ ಕೂಡಲೇ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಇನ್ನೂ ಸರಕಾರ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಕಾರವಾರ ರೋಡ ಚರ್ಚ್‌ನಿಂದ ಕಿತ್ತೂರ ಚನ್ನಮ್ಮ ಸರ್ಕಲ್‌ರೆಗೆ ಶಾಂತಿಯುತ ಪ್ರತಿಭಟನೆ ಮೆರವಣಿಗೆಯನ್ನು ನಡೆಸಲಾಯಿತು.

Edited By : Vinayak Patil
Kshetra Samachara

Kshetra Samachara

20/10/2024 05:33 pm

Cinque Terre

156.58 K

Cinque Terre

3

ಸಂಬಂಧಿತ ಸುದ್ದಿ