ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್‌ ಬಾಸ್‌ ವೇದಿಕೆ ಮೇಲೆ ಇದ್ದಾಗಲೇ ಸುದೀಪ್‌ ಅಮ್ಮ ಆಸ್ಪತ್ರೆ ದಾಖಲು, ತಾಯಿಯನ್ನು ನೆನೆದು ಭಾವುಕರಾದ ಕಿಚ್ಚ

ಜೀವನದಲ್ಲಿ ಎಡವಿದಾಗ,ಬಿದ್ದು ಪೆಟ್ಟಾದಾಗ, ಕಷ್ಟಗಳು ಏನೇ ಬಂದರು ನಮ್ಮೆಲ್ಲರ ಬಾಯಲ್ಲಿ ಬರುವ ಮೊದಲ ನುಡಿ ʼಅಮ್ಮʼ . ಅಮ್ಮ ಅಂದರೆ ಆಕಾಶ, ಆ ಜಾಗ ಯಾರಿಂದಲೋ ಮತ್ತೇ ತುಂಬಲು ಸಾಧ್ಯವೇ ಇಲ್ಲ. ಕಿಚ್ಚ ಸುದೀಪ್‌ ನಿನ್ನೆ ತನ್ನ ತಾಯಿಯನ್ನು ಕಳೆದುಕೊಂಡು ಮಾತೃ ವಿಯೋಗದ ದುಃಖದಲ್ಲಿದ್ದಾರೆ.ತನ್ನ ತಾಯಿಯ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಎಕ್ಸ್‌ ನಲ್ಲಿ ಸುದೀಪ್‌ ಅಮ್ಮನ ಜೊತೆಗಿದ್ದ ತನ್ನ ಬಾಂಧವ್ಯ ಹಾಗೂ ಆಕೆ ಆಸ್ಪತ್ರೆ ದಾಖಲಾಗಿದ್ದಾಗಲು ಬಿಗ್‌ ಬಾಸ್‌ ವೇದಿಕೆಯಲ್ಲಿದ್ದಿದ್ದರಿಂದ ತಕ್ಷಣ ಹೋಗಲಾಗದೇ ಇದ್ದಾಗ ಆದ ಸಂಕಟವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ ಸುದೀಪ್.‌

" ನನ್ನ ಅಮ್ಮ ದೇವತೆ,ಯಾರಿಗೂ ಎನೂ ಬೇಧ ಭಾವ ಮಾಡದೇ ಪ್ರೀತಿಸುವ,ಕ್ಷಮಿಸುವ,ಕಾಳಜಿ ತೋರುವ ಮಾನವ ರೂಪದಲ್ಲಿರುವ ನಿಜವಾದ ದೇವರು, ಅವಳು ನನ್ನ ಹಬ್ಬ, ನನ್ನ ಗುರು, ನನ್ನ ನಿಜವಾದ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ, ನನ್ನ ಚೆನ್ನಾಗಿಲ್ಲದ ಕೆಲಸವನ್ನು ಇಷ್ಟಪಡುವ ದೇವತೆ, ಆದರೆ ಈಗ ಅವಳು ನೆನಪು ಮಾತ್ರ.ಪ್ರತಿ ದಿನ ಬೆಳಗ್ಗೆ 5.30 ರ ಸುಮಾರಿಗೆ ನನಗೆ ಗುಡ್‌ ಮಾರ್ನಿಂಗ್‌ ಕಂದಾ ಎಂದು ಮೆಸೇಜ್‌ ಹಾಕುವ ನನ್ನ ಅಮ್ಮ ನನಗೆ ಕೊನೆಯದಾಗಿ ಮೆಸೇಜ್‌ ಕಳುಹಿಸಿದ್ದು ಅಕ್ಟೋಬರ್ 18 ಶುಕ್ರವಾರದಂದು ಆದರೆ ಕೆಲಸದ ಬ್ಯುಸಿಯಲ್ಲಿ ಆ ಮೇಸೆಜ್‌ ನಾನು ಓದಲಿಲ್ಲ,ಮರುದಿನ ಬೆಳಗ್ಗೆ ಬಿಗ್‌ ಬಾಸ್‌ ಸೆಟ್‌ ನಲ್ಲಿ ಎದ್ದು ಹಲವಾರು ವರುಷಗಳ ಬಳಿಕ ಅದ್ಯಾಕು ಇಂದು ನಾನಗಿಯೇ ಮೆಸೇಜ್‌,ಕಾಲ್‌ ಮಾಡಬೇಕು ಎಂದೆನಿಸಿತು."

ಬಿಗ್‌ ಬಾಸ್‌ ಶನಿವಾರದ ಸಂಚಿಕೆಯ ನಿರೂಪಣೆ,ಚರ್ಚೆ ಗೆ ನನ್ನ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದೆ,ನಾನು ವೇದಿಕೆಯ ಮೇಲೆ ಹೋಗುವ ಮೊದಲು ಅಮ್ಮನನ್ನು ಆಸ್ಪತ್ರೆ ದಾಖಲು ಮಾಡಲಾಗಿ ಎನ್ನುವ ಮೆಸೇಜ್‌ ಬಂದಿತ್ತು,ತಕ್ಷಣ ಆಸ್ಪತ್ರೆಯಲ್ಲಿದ್ದ ನನ್ನ ತಂಗಿಗೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ ವೇದಿಕೆ ಮೇಲೆ ಹೋದೆ,ವೇದಿಕೆ ಮೇಲೆ ಇದ್ದಾಗಲೇ ಅಮ್ಮನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಇನ್ನೊಂದು ಮೆಸೇಜ್‌ ಬಂತು ಆ ಪರಿಸ್ಥಿತಿಯಲ್ಲಿ ನಾನು ಅಸಹಾಯಕನಾಗಿಬಿಟ್ಟೆ ಒಂದು ಕಡೆ ಕಾರ್ಯಕ್ರಮದ ಜವಾಬ್ಧಾರಿ ಇನ್ನೊಂದು ಕಡೆ ತಾಯಿಯ ಆರೋಗ್ಯ ದಿಕ್ಕುತೋಚದಾಗಿತ್ತು,ಆದರೂ ವಹಿಸಿಕೊಂಡ ಕೆಲಸ ಸಂಪೂರ್ಣ ಮಾಡುವ ಪಾಠ ಹೇಳಿಕೊಟ್ಟ ತಾಯಿಯನ್ನು ನೆನೆದು ವೇದಿಕೆ ಮೇಲಿನ ಚರ್ಚೆ ಮುಗಿಸಿ ಆಸ್ಪತ್ರೆ ದೌಡಾಯಿಸುವಷ್ಟರಲ್ಲಿ ಅಮ್ಮನನ್ನು ವೆಂಟಿಲೇಟರ್‌ಗೆ ಹಾಕಲಾಗಿತ್ತು, ಅಮ್ಮ ಪ್ರಜ್ಙೆಯಲ್ಲಿದ್ದಾಗ ಕೊನೆಯ ಬಾರಿ ನನಗೆ ಆಕೆಯನ್ನು ನೋಡಲಾಗಲಿಲ್ಲ ಎಂದು ಭಾವುಕರಾಗಿ ಬರೆದಿದ್ದಾರೆ ಸುದೀಪ್.‌

ಶೂಟಿಂಗ್‌ ತೆರಳುವ ಮೊದಲು ಗಟ್ಟಿಯಾಗಿ ತಬ್ಬಿ ಕಳುಹಿಸಿಕೊಟ್ಟಿದ್ದ ಅಮ್ಮ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆ ಸೇರಿ, ವಿಧಿವಶರಾಗಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ, ನಿನ್ನೆಯ ಮಂಗಳಕರವಾದ ದಿನದಂದು ಪ್ರಕೃತಿ,ದೇವರ ಮಡಿಲಿಗೆ ಸೇರಿದ್ದಾಳೆ ನನ್ನ ತಾಯಿ. ಆಕೆಗೆ ಗೌರವ ಸಲ್ಲಿಸಲು ಆಗಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಟ್ವೀಟ್‌ ಮೂಲಕ ಎಲ್ಲರಿಗೂ ಕೃತಜ್ಙತೆ ಅರ್ಪಿಸಿದ್ದಾರೆ.

Edited By : Suman K
PublicNext

PublicNext

21/10/2024 05:26 pm

Cinque Terre

110.8 K

Cinque Terre

0

ಸಂಬಂಧಿತ ಸುದ್ದಿ