ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೆಬ್‌ ಸೀರೀಸ್‌ ನಲ್ಲಿ ಅಪ್ರಾಪ್ತ ಬಾಲಕಿ ಬಳಸಿ ಅಶ್ಲೀಲ ದೃಶ್ಯ ಶೂಟ್‌, ಏಕ್ತಾ ಕಪೂರ್‌ ಹಾಗೂ ತಾಯಿ ವಿರುದ್ಧ ಪೋಕ್ಸೋ ಕೇಸ್‌ ದಾಖಲು

ಭಾರತೀಯ ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ವಿರುದ್ಧ POCSO ಕಾಯಿದೆಯಡಿಯಲ್ಲಿ ದೂರುದಾಖಲಾಗಿದೆ.OTT ಶೋ ಗಾಂಡಿ ಬಾತ್ ವೆಬ್ ಸರಣಿಯ ಸೀಸನ್ 6 ರ ಒಂದು ಎಪಿಸೋಡ್‌ ನಲ್ಲಿ ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡು ಅಶ್ಲೀಲ ದೃಶ್ಯಗಳನ್ನು ತೋರಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.ಮುಂಬೈ ಪೊಲೀಸರ ಪ್ರಕಾರ, ಬಾಲಾಜಿ ಟೆಲಿಫಿಲ್ಮ್ ಲಿಮಿಟೆಡ್, ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಮುಂಬೈನ MHB ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295-A, IT ಕಾಯ್ದೆ ಮತ್ತು POCSO ಕಾಯ್ದೆಯ ಸೆಕ್ಷನ್ 13 ಮತ್ತು 15 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ವೆಬ್‌ ಸೀರೀಸ್‌ 2021 ರಲ್ಲಿ ಬಿಡುಗಡೆಗೊಂಡಿತ್ತು.ಈ ವಿವಾದಾತ್ಮಕ ಎಪಿಸೋಡ್ ಪ್ರಸ್ತುತ ಆಲ್ಟ್ ಬಾಲಾಜಿಯಲ್ಲಿ ಪ್ರಸಾರವಾಗುತ್ತಿಲ್ಲ.ಇನ್ನೂ ಇತ್ತೀಚಿಗೆ ಅಂದರೆ ಏಪ್ರಿಲ್ 19 ರಂದು ಏಕ್ತಾ ಕಪೂರ್‌ ಸಿನಿಮಾ ಲವ್, ಸೆಕ್ಸ್ ಔರ್ ಧೋಖಾ 2 ಥಿಯೇಟರ್‌ ಗಳಲ್ಲಿ ಬಿಡುಗಡೆಗೊಂಡಿತ್ತು.

Edited By : Somashekar
PublicNext

PublicNext

21/10/2024 07:30 pm

Cinque Terre

17.3 K

Cinque Terre

0

ಸಂಬಂಧಿತ ಸುದ್ದಿ