ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜ್ಯಮಟ್ಟದಲ್ಲಿ ಗಮನಸೆಳೆದ ಬೆಂಗಳೂರು ಕಂಬಳ ಈ ಬಾರಿ ನಡೆಯೋದೇ ಡೌಟ್ - ಒಂದೇ ವರ್ಷಕ್ಕೇ ಬಂದ್?

ಮಂಗಳೂರು: ಈ ವರ್ಷದ ಕಂಬಳದ ಋತು ಆರಂಭಕ್ಕೆ ಕೆಲವೇ ದಿನಗಳಷ್ಟೇ ಬಾಕಿಯಿದೆ. ಈ ವರ್ಷದ ಮೊದಲ ಕಂಬಳ‌ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ ಎಂಬುವುದನ್ನು ಕಂಬಳ ಸಮಿತಿ ಹೇಳಿತ್ತು. ಆದರೆ ಈ ಬಾರಿ ಬೆಂಗಳೂರು ಕಂಬಳ ನಡೆಯೋದೇ ಡೌಟ್ ಎಂಬ ವಿಚಾರ ಬಯಲಾಗಿದೆ. ಬೆಂಗಳೂರು ಕಂಬಳಕ್ಕೆ ಕೇವಲ 8ದಿನ ಬಾಕಿ ಇದೆ. ಆದರೆ ಈ ತನಕ ಯಾವುದೇ ಪೂರ್ವ ತಯಾರಿ ನಡೆದಿಲ್ಲ. ಬೆಂಗಳೂರಿನಲ್ಲಿ ಕಂಬಳ ನಡೆಸೋದೇ ಬಹಳ ಸವಾಲಿನ ಕೆಲಸವಾದ್ದರಿಂದ ಕಂಬಳ ಸಮಿತಿ ಕಂಬಳ ನಡೆಸುವ ಸಾಧ್ಯತೆ ಕಡಿಮೆಯಾಗಿದೆ.

ಕಳೆದ ಬಾರಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಕಂಬಳ ಆಯೋಜನೆಗೊಂಡಿತ್ತು. ಈ ಬಾರಿಯೂ ಅಕ್ಟೋಬರ್ 26 ರಂದು ಬೆಂಗಳೂರು ಕಂಬಳ ನಡೆಯುದಾಗಿ ಜಿಲ್ಲಾ ಕಂಬಳ ಸಮಿತಿ ದಿನಾಂಕ ಘೋಷಿಸಿತ್ತು. ಆದರೆ ಬೆಂಗಳೂರು ಕಂಬಳ ಸಮಿತಿ ಇನ್ನೂ ಯಾವುದೇ ಪೂರ್ವ ತಯಾರಿಯನ್ನು ಮಾಡಿಲ್ಲ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನುಮತಿ ಸಿಗಬೇಕಾದರೆ ಮೂರು ತಿಂಗಳ ಪ್ರಕ್ರಿಯೆ ನಡೆಯಬೇಕು. ಮೈಸೂರು ಅರಮನೆ ಮತ್ತು ರಾಜ್ಯ ಸರ್ಕಾರದಿಂದ‌ ಅನುಮತಿ ಸಿಗಬೇಕು. ಕರೆ ನಿರ್ಮಾಣ ಸೇರಿದಂತೆ ಮೂಲಭೂತ ವ್ಯವಸ್ಥೆಗಳಾಗಬೇಕು.

ಕಂಬಳಕ್ಕಾಗಿ ಕಂಬಳ ಕೋಣಗಳನ್ನು ಕರಾವಳಿಯಿಂದ ಬೆಂಗಳೂರಿಗೆ ಕೊಂಡೊಯ್ಯಬೇಕು. ಇಷ್ಟೆಲ್ಲಾ ಸವಾಲುಗಳ ಮಧ್ಯೆ ಕೋಟ್ಯಾಂತರ ರೂಪಾಯಿ ಖರ್ಚುವೆಚ್ಚವೂ ಬೇಡುತ್ತದೆ. ಕಳೆದ ಬಾರಿ ಇದನ್ನೆಲ್ಲಾ ಯಶಸ್ವಿಯಾಗಿ ನಿಭಾಯಿಸಿದ ಕಂಬಳ ಸಮಿತಿ ಅದ್ಧೂರಿ ಬೆಂಗಳೂರು ಕಂಬಳವನ್ನು ಮಾಡಿತ್ತು. ಆದರೆ ಈ ಬಾರಿ ಕಂಬಳ ಸಮಿತಿ ಯಾವುದೇ ತಯಾರಿಯನ್ನು ಮಾಡಿಲ್ಲ. ಹಾಗಾಗಿ ಬೆಂಗಳೂರು ಕಂಬಳ ಇನ್ನು ನಡೆಯೋದೇ ಡೌಟ್ ಎಂಬಂತಾಗಿದೆ.

ಕಂಬಳ ಕೋಣಗಳ ಮಾಲಕರು ಒಪ್ಪಿಗೆ ನೀಡಿದರೆ ಮಾರ್ಚ್‌ನಲ್ಲಿ ಬೆಂಗಳೂರು ಕಂಬಳ ನಡೆಸುತ್ತೇವೆ ಎಂದು ಬೆಂಗಳೂರು ಕಂಬಳ ಸಮಿತಿ ಹೇಳಿದೆ. ಈ ಬಗ್ಗೆ ಕಂಬಳ ಸಮಿತಿಯೊಂದಿಗೆ ಚರ್ಚೆ ಮಾಡಿ ನಿರ್ಧಾರ ಪ್ರಕಟ ಮಾಡೋದಾಗಿ ಕಂಬಳ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/10/2024 03:12 pm

Cinque Terre

2.17 K

Cinque Terre

0

ಸಂಬಂಧಿತ ಸುದ್ದಿ