ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ಸಂಭ್ರಮ-50 ರಥಕ್ಕೆ ಸಾಗರದಲ್ಲಿ ಅದ್ಧೂರಿ ಸ್ವಾಗತ

ಸಾಗರ: ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ 50 ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಕರ್ನಾಟಕ ಸಂಭ್ರಮ-50 ರಥ ಶುಕ್ರವಾರ ಸಾಗರ ಪಟ್ಟಣಕ್ಕೆ ಆಗಮಿಸಿತು.

ಈ ಸಂದರ್ಭದಲ್ಲಿ ತಾಲೂಕು ಆಡಳಿತ,ನಗರಸಭೆ , ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಭವ್ಯ ಸ್ವಾಗತ ಕೋರಿದರು.

ಸಾಗರಕ್ಕೆ ಆಗಮಿಸಿದ ಕರ್ನಾಟಕ ಸಂಭ್ರಮ-50 ರಥಕ್ಕೆ ಸಾಗರದ ಶ್ರೀ ಮಹಾ ಗಣಪತಿ ದೇವಸ್ಥಾನದ ಬಳಿ ವಿಶೇಷ ಪೂಜೆ ಸಲ್ಲಿಸಿದು ಉಪ ವಿಭಾಗಾಧಿಕಾರಿ ಯತೀಶ್ ಅರ್ ರವರು ಕರ್ನಾಟಕ ಸಂಭ್ರಮ-50 ರಥಕ್ಕೆ ಮಾಲಾರ್ಪಣೆ ಮಾಡಿದರು.

ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು, ಸಾಗರದ ಬಿಹೆಚ್ ರಸ್ತೆಯಲ್ಲಿ ಇರುವ ಉಪ ವಿಭಾಗ ಪೋಲಿಸ್ ಅಧೀಕ್ಷಕರ ಕಛೇರಿ ಸಮಿಪಿ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ್ ಕರ್ನಾಟಕ ಸಂಭ್ರಮ-50 ರಥಕ್ಕೆ ಪೋಲಿಸ್ ಇಲಾಖೆ ವತಿಯಿಂದ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಕಛೇರಿಯ ಉಪ ತಹಶೀಲ್ದಾರ್ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ ಈ, ನಗರಸಭೆಯ ಅಧಿಕಾರಿಗಳಾದ , ಮಮತಾ, ರಾಜಕುಮಾರ್, ಮದನ್ ಕೆ, ರಾಜೇಶ್, ನಗರಸಭಾ ಸದಸ್ಯರಾದ ಸಯ್ಯದ್ ಜಾಕೀರ್,ಮಧುಮಲತಿ, ಸಾಗರ ಪೇಟೆ ಠಾಣೆ ಇನ್ಸ್ಪೆಕ್ಟರ್ ಸೀತಾರಾಮ, ಗ್ರಾಮಾಂತರ ಠಾಣೆಯ ಸಂತೋಷ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ ಸ್ವಾಮೀ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ನಾಗೇಶ್, ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು, ಪ್ರಮುಖರಾದ ಕಲಸೆ ಚಂದ್ರಪ್ಪ, ಪರಮೇಶ್ವರ್ ಜಿ, ಹಾಜರಿದ್ದರು.

Edited By : Vinayak Patil
Kshetra Samachara

Kshetra Samachara

18/10/2024 02:41 pm

Cinque Terre

10.72 K

Cinque Terre

0

ಸಂಬಂಧಿತ ಸುದ್ದಿ