ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೊರಬ: ಭೂಮಿ ಹುಣ್ಣಿಮೆ ಹಬ್ಬ ಸಂಭ್ರಮ- ಭೂತಾಯಿಗೆ ಸೀಮಂತ ಪೂಜೆ!

ಸೊರಬ: ಸೊರಬ ತಾಲ್ಲೂಕಿನಲ್ಲಿ ಭೂಮಿ ಹುಣ್ಣಿಮೆ ಹಬ್ಬವನ್ನು ರೈತರು ಇಂದು ಸಡಗರದಿಂದ ಆಚರಿಸಿದರು. ಹಚ್ಚ ಹಸಿರು ಬೆಳೆಗಳಿಂದ ಕಂಗೊಳಿಸುತ್ತಿರುವ ಹೊಲಗಳಲ್ಲಿ ಭೂಮಿ ತಾಯಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿದವು.

ಭೂಮಿ ಹುಣ್ಣಿಮೆ ಹಬ್ಬದಲ್ಲಿ ಭೂಮಿಗೆ ಗರ್ಭಿಣಿಯ ಪ್ರತೀತಿಯನ್ನು ನೀಡಲಾಗುತ್ತದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಈಗ ಹಾಲು ತುಂಬಿದಂತಿರುವ ಈ ಕಾಲದಲ್ಲಿ, ಭೂಮಿ ತಾಯಿಗೆ ಸೀಮಂತದಂತೆ ಪೂಜೆ ಸಲ್ಲಿಸಲಾಗುತ್ತದೆ.

ರೈತರು ಬೆಳೆದು ನಿಂತ ಪೈರುಗಳಿಗೆ ಉಡಿ ಹಾಕಿ ಪೂಜೆ ಸಲ್ಲಿಸುತ್ತಾರೆ. ಕೆಲವರು ಅಡಕೆ ಮರಗಳಿಗೆ ಪೂಜೆ ಮಾಡಿದರೆ, ಇನ್ನು ಕೆಲವರು ಭತ್ತದ ಗದ್ದೆಗಳನ್ನು ಸಿಂಗರಿಸುತ್ತಾರೆ. ಹಸಿರು ಚಿತ್ತಾರಗಳಿಂದ ಅಲಂಕೃತಗೊಂಡ ಎರಡು ಬುಟ್ಟಿಗಳಲ್ಲಿ ವಿವಿಧ ಬಗೆಯ ಸಿಹಿ ಮತ್ತು ಕರಿದ ಅಡುಗೆಗಳನ್ನು ಹೊಲಗಳಿಗೆ ತೆಗೆದುಕೊಂಡು ಹೋಗಿ, ಭೂಮಿಗೆ ನೈವೇದ್ಯ ಮಾಡಲಾಗುತ್ತದೆ.

ನೈವೇದ್ಯದ ಬಳಿಕ ಚರಗವನ್ನು ಭೂಮಿಗೆ ಅರ್ಪಿಸುವ ಮೂಲಕ ಪೂಜಾವಿಧಿಯನ್ನು ಪೂರ್ಣಗೊಳಿಸಲಾಗುತ್ತದೆ. ರೈತರು ನಂತರ ಹೊಲದಲ್ಲೇ ಕುಟುಂಬ ಸದಸ್ಯರೊಂದಿಗೆ ಸೇರಿ ಊಟವನ್ನು ಮಾಡಿ ಆನಂದಿಸುತ್ತಾರೆ.

ಭೂಮಿ ಹುಣ್ಣಿಮೆ ಹಬ್ಬ ರೈತರ ಜೀವನದಲ್ಲಿ ಶ್ರದ್ಧೆ ಮತ್ತು ಭಾವನಾತ್ಮಕ ಒಲವಿನಿಂದ ಕೂಡಿದೆ. ಬೆಳೆಗಳಲ್ಲಿ ಸಿರಿ ಮೂಡಿದಾಗ ಭೂಮಿ ತಾಯಿಗೆ ನೀಡುವ ಸೀಮಂತದ ಸಂಭ್ರಮವು ಇವರ ಜೀವನದ ಅವಿಭಾಜ್ಯ ಭಾಗವಾಗಿದೆ.

Edited By : Vinayak Patil
PublicNext

PublicNext

17/10/2024 09:28 pm

Cinque Terre

31.24 K

Cinque Terre

0

ಸಂಬಂಧಿತ ಸುದ್ದಿ