ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಬರೀ ಬೀಪ್… ಬೀಪ್…. ಸೌಂಡ್

ಬೆಂಗಳೂರು: ಬಿಗ್ ಬಾಸ್ ಸೀಸನ್ 11, ಕಳೆದೆಲ್ಲ ಸೀಸನ್ ಗೆ ಹೋಲಿಕೆ ಮಾಡಿದರೆ ಈ ಬಾರಿ ದೊಡ್ಡ ಮನೆಯಲ್ಲಿ ಅವಾಚ್ಯ ಪದಗಳ ಬಳಕೆ ಹೆಚ್ಚಾಗಿದೆ. ಕಂಟೆಸ್ಟೆಂಟ್ಗಳು ಬೀಪ್ ಹಾಕಲೇಬೇಕಾದಂತ ಕೆಟ್ಟ ಕೊಳಕು ಪದಗಳನ್ನು ಬಳಸಿದ್ದಾರೆ.

ನಿನ್ನೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳವೇ ಆಗಿದೆ. ಇಡೀ ಮನೆ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದರು. ಇದಕ್ಕೆ ಕಾರಣ ಜಗದೀಶ್ ಹಂಸ ಅವರ ವಿರುದ್ಧ ಬಳಕೆ ಮಾಡಿದ ಶಬ್ಧ ಎಲ್ಲರ ಕೋಪಕ್ಕೆ ಕಾರಣವಾಗಿದೆ.

' ನನ್ನ ಗಂಡನನ್ನ ಸಾಯಿಸೋಕೆ ಅವರು ಯಾರು ? ಇದಕ್ಕೆ ನೀವೇ ಏನಾದ್ರೂ ಮಾಡ್ತಿರೋ ಅಥವಾ ನಾವೇ ಪರಿಹಾರ ಕಂಡುಕೊಳ್ಳಬೇಕಾ? ' ಎಂದು ಹಂಸ ಅವರು ಬಿಗ್ ಬಾಸ್ ಕ್ಯಾಮೆರಾ ಎದುರು ಅವಾಜ್ ಹಾಕಿದರು.

ಈ ಜಗಳ, ಅವಾಚ್ಯ ಪದಗಳ ಬಳಕೆ ಇಲ್ಲಿಗೆ ನಿಲಲ್ಲಿಲ್ಲ. ಬಿಗ್ ಬಾಸ್ ಎಲ್ಲರನ್ನೂ ಸೋಫಾ ಮೇಲೆ ಸೈಲೆಂಟ್ ಆಗಿ ಕುಳಿತುಕೊಳ್ಳಲು ಹೇಳಿದರು, ಆದರೆ ಬಿಗ್ ಬಾಸ್ ಆದೇಶದ ಮೇರೆಗೂ ಜಗದೀಶ್ ಅವರು ಅವಾಚ್ಯ ಪದಗಳನ್ನು ಬಳಕೆ ಮಾಡಿದರು. ರಂಜಿತ್ ಅವರಿಗೆ ಬಾಯಿಗೆ ಬಂದಂತೆ ಬೈದಿದ್ದು, ರಂಜಿತ್ ಅವರು ಕೂಡ ಅವಾಚ್ಯ ಪದಗಳಿಂದ ಕೋಪದಿಂದ ಕೂಗಾಡಿದ್ದಾರೆ. ಒಟ್ಟಾರೆ ನಿನ್ನೆಯ ಬಿಗ್ ಬಾಸ್ ಎಪಿಸೋಡ್ ಹೆಚ್ಚು ಗಲಾಟೆ, ಹೊಡೆದಾಟ ಹಾಗೂ ಬೈಗುಳಗಳಿಂದಲೇ ಕೂಡಿತ್ತು.

Edited By : Somashekar
PublicNext

PublicNext

18/10/2024 02:32 pm

Cinque Terre

7.58 K

Cinque Terre

0

ಸಂಬಂಧಿತ ಸುದ್ದಿ