ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿಯಾಳ : ಪಟ್ಟಣದಲ್ಲಿ ಬೆಂಕಿ ಅವಘಡ

ಹಳಿಯಾಳ : ಪಟ್ಟಣದ ಉಪ ನೋಂದಣಿ ಕಚೇರಿಯ ಎದುರು ವಿವಿಧ ಅಂಗಡಿ ಸೇರಿ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಅಪಾರ ಹಾನಿಯಾದ ಘಟನೆ ಗುರುವಾರ ಸಂಜೆ ನಡೆದಿದೆ. ಇನ್ನು ಮನೆ‌ ಬೆಂಕಿಗಾಹುತಿಯಾಗುತ್ತಿದ್ದಂತೆ ಮನೆಯಲ್ಲಿಯ ಎಲ್ಲ ವಸ್ತುಗಳು ಭಸ್ಮವಾಗಿದ್ದು ಅಕ್ಕ ಪಕ್ಕದ ಎಲ್ಲ ಅಂಗಡಿಗಳೂ ಅಪಾರ ಪ್ರಮಾಣದ ಹಾನಿಗೊಳಗಾಗಿದೆ.

ಭಯಂಕರ ಮಳೆಯ ನಡುವೆಯೂ ನಿಲ್ಲದ ಬೆಂಕಿ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹಾಗೂ

ಪೊಲೀಸ್ ಸಿಬ್ಬಂಧಿ ಹರಸಾಹಸಪಟ್ಟರು. ಅವಘಡದ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಸತತ ಎರಡು ಘಂಟೆಗಳ ಪರಿಶ್ರಮದ ನಂತರ ಬೆಂಕಿ ತಹಬಂದಿಗೆ ಬಂದಿದೆ.

ಹಳಿಯಾಳ ಪಿಎಸೈ ವಿನೋದ ರೆಡ್ಡಿ ಮತ್ತು ಕ್ರೈಮ್ ಪಿಎಸೈ ಅಮೀನ ಅತ್ತಾರ ಮಾರ್ಗದರ್ಶನದಲ್ಲಿ ಘಟನಾ ಸ್ಥಳಕ್ಕೆ ಬಿಗಿ ಬಂದೋಬಸ್ತ ವಹಿಸಲಾಗಿದೆ. ಇನ್ನು ಅಗ್ನಿ ನಿಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಯು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ

ಗದಿಗೆಪ್ಪಾ ಖಾನಾವಳಿ, ರವಿ ಝೆರಾಕ್ಸ್ ಸೆಂಟರ್ನ, ಆರ್ ಎನ್ ಎಸ್ ಎಲೆಕ್ಟ್ರಿಕಲ್ಸ್ ಅಪ್ಪು ಜ್ಯುವೆಲ್ಲರಿ, ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇನ್ನು ಸರ್ಕಾರದ ರೂಲ್ಸ್‌ ಪ್ರಕಾರ ಯಾವುದೇ ಕಾರ್ಖಾನೆಯಲ್ಲಿ ಅಗ್ನಿ ಶಾಮಕ ದಳ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ಆದೇಶ ಇದೆ ಆದರೆ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಅಲ್ಲದೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Edited By : Shivu K
PublicNext

PublicNext

18/10/2024 10:18 am

Cinque Terre

19.03 K

Cinque Terre

0

ಸಂಬಂಧಿತ ಸುದ್ದಿ