ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಮಳೆ ಅವಾಂತರಕ್ಕೆ ಮನೆ ಗೋಡೆ ಕುಸಿತ

ಚಿತ್ರದುರ್ಗ : ಕಳೆದ ಒಂದು ವಾರಗಳಿಂದ ಬಿಟ್ಟುಬಿಡದೆ ಸುರಿತ್ತಿರುವ ಮಳೆಯಿಂದಾಗಿ ಅಲಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಬಿದ್ದಿದ್ದು ಮನೆಯ ಮಾಲೀಕ ಸಂಕಷ್ಟಕ್ಕಿಡಾಗಿದ್ದಾನೆ.

ಚಿತ್ರಹಳ್ಳಿ ಗ್ರಾಮದ ದೇವರಾಜ್ ಎಂಬುವರಿಗೆ ಸೇರಿದ ಮನೆಯಯಾಗಿದ್ದು ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆಯೂ ಕುಸಿದು ಬಿದ್ದಿದು ಮನೆಯರೆಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನಷ್ಟು ದಿನಗಳ ಕಾಲ ಮಳೆ ಇರುವುದರಿಂದ ಮನೆಯಲ್ಲಿ ವಾಸಿಸುವುದಕ್ಕೆ ಭಯವಾಗುತ್ತಿದೆ ಮನೆಯ ಹಿಂಬದಿಯ ಗೋಡೆ ಸಂಪೂರ್ಣವಾಗಿ ಮಳೆಯ ನೀರಿನಿಂದ ಶೀತಲಗೊಂಡಿದ್ದು ಈಗಲ್ಲೋ ಅಗಲ್ಲೋ ಮನೆ ಬೀಳುವಂತಿದ್ದೆ. ವಾಸಿಸುವುದಕ್ಕೆ ಆಸರೆಯಾಗಿದ್ದ ಇದೊಂದು ಮನೆಯು ಸಹ ಮಳೆಯ ಅವಾಂತರದಿಂದ ಗೋಡೆ ಕುಸಿದು ಬಿದ್ದಿದ್ದು ಮನೆಯ ಮಾಲೀಕ ಕಂಗಲಾಗಿದ್ದಾನೆ .

ದೇವರಾಜ್ ಕುಟುಂಬದವರು ಸದ್ಯ ಸಮುದಾಯ ಭವನದಲ್ಲಿ ವಾಸವಾಗಿದ್ದು, ನೆರವಿನ ಹಸ್ತ್ರ ಬೇಕಾಗಿದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಥಳವನ್ನು ಪರಿಶೀಲಿಸಿ ನ್ಯಾಯ ದೊರಕಿಸಬೇಕಾಗಿದೆ.

Edited By : Shivu K
PublicNext

PublicNext

17/10/2024 03:27 pm

Cinque Terre

20.58 K

Cinque Terre

0

ಸಂಬಂಧಿತ ಸುದ್ದಿ