ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವಿವಿಧ ಬೇಡಿಕೆ ಈಡೇರಿಸುವಂತೆ ರೈತರಿಂದ ಮನವಿ

ನವಲಗುಂದ: ತಾಲೂಕಷ್ಟೇ ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ, ಉಳ್ಳಾಗಡ್ಡಿ, ಶೇಂಗಾ ಸೇರಿದಂತೆ ಅನೇಕ ಬೆಳೆಗಳು ಮಳೆ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ರೈತ ಭವನದ ರೈತ ಹೋರಾಟ ವೇದಿಕೆಯಿಂದ ತಹಶೀಲ್ದಾ‌ರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಈ ವೇಳೆಯಲ್ಲಿ ರೈತ ಮುಖಂಡ ಸುಭಾಷಗೌಡ ಪಾಟೀಲ ಮಾತನಾಡಿ, ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಆಜು ಬಾಜು ಅಂದರೆ 2ಕಿಮೀ ಬಲ ಮತ್ತು ಎಡಭಾಗಕ್ಕೆ ಸತತವಾಗಿ ಹಳ್ಳದ ನೀರು ಹರಿದಿದ್ದರಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದೇವೆ ಸರ್ಕಾರಗಳು ವಿಶೇಷ ಪ್ಯಾಕೇಜ ಘೋಷಣೆ ಮಾಡಿ ರೈತರ ಖಾತೆಗೆ ಹಣ ಜಮಾ ಮಾಡಬೇಕು ಹಾಗೂ ಬೆಳೆವಿಮೆ ಹಣ ಬಿಡುಗಡೆಗೊಳಿಸಬೇಕು ಎಂದು ಅಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಲೇಶ ಉಪ್ಪಾರ, ಎಲ್ಲಪ್ಪ ದಾಡಿಬಾಯಿ, ಶಿವಪ್ಪ ಸಂಗಳ, ಸಿದ್ದಲಿಂಗಪ್ಪ ಹಳ್ಳದ, ಬಸನಗೌಡ ಹುಣಸಿಕಟ್ಟೆ ಗೋವಿಂದರೆಡ್ಡಿ ಮೊರಬದ, ಮುರಗೇಪ್ಪ ಪಲ್ಲೆದ, ಗಂಗಪ್ಪ ಸಂಗಟಿ, ಬಸಪ್ಪ ಬಳ್ಕೊಳ್ಳಿ ಕರಿಯಪ್ಪ ತಳವಾರ, ಸಂಗಪ್ಪ ನೀಡವನಿ, ರವಿ ತೋಟದ ಇದ್ದರು.

Edited By : PublicNext Desk
Kshetra Samachara

Kshetra Samachara

17/10/2024 03:11 pm

Cinque Terre

5.59 K

Cinque Terre

0

ಸಂಬಂಧಿತ ಸುದ್ದಿ