ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ, ಗುಹಾತೀರ್ಥ ಸ್ನಾನಕ್ಕೆ ಚಾಲನೆ

ಬಜಪೆ: ಜಾಬಾಲಿ ಮಹರ್ಷಿಗಳ ತಪೋವನವೆಂದೆ ಪ್ರಖ್ಯಾತಿಯಾಗಿರುವ ತುಳುನಾಡಿನ ಪ್ರಸಿದ್ದ ಗುಹಾಲಯ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ ಗುಹಾತೀರ್ಥ ಸ್ನಾನ ಕಾರ್ಯಕ್ರಮ ನಡೆಯಿತು. ಗುರುವಾರದಂದು ತುಲಾ ಸಂಕ್ರಮಣದ ಸಂದರ್ಭ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳೊಂದಿಗೆ ಕ್ಷೇತ್ರದ ತಂತ್ರಿಗಳಾದ ಬಗ್ಗಮಜಲು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಶ್ರೀಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಶ್ರೀ ಸೋಮನಾಥೇಶ್ವರ ಶ್ರೀ ಮಹಾಗಣಪತಿ ದೇವರು ಹಾಗೂ ಶ್ರೀ ಜಾಬಾಲಿ ಮಹರ್ಷಿ ಅವರ ಸನ್ನಿಧಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ, ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ,ವಸಂತ ಭಟ್ ನೆಲ್ಲಿತೀರ್ಥ,ದೇಗುಲದ ಅರ್ಚಕ ಗಣಪತಿ ಭಟ್, ಅನಂತಕೃಷ್ಣ ಅಡಿಗ ಪುತ್ತಿಗೆ, ಎನ್ ವಿ ವೆಂಕಟರಾಜ ಭಟ್,ಎನ್ ವಿ ಜಿ ಕೆ ಭಟ್,ಪ್ರಸನ್ನ ಭಟ್ ನೆಲ್ಲಿತೀರ್ಥ,ಆನಂದ ಕಾವ ಸಾಂತ್ರಬೈಲು,ಕೃಷ್ಣಪ್ಪ ಪೂಜಾರಿ,ಸುಂದರ ಪೂಜಾರಿ,ಹನುಮಂತ ಕಾಮತ್ ಸ್ಥಳೀಯ ಪ್ರಮುಖರು,ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಗುಹಾಪ್ರವೇಶಕ್ಕೆ ಮುಂಚಿತವಾಗಿ ಕ್ಷೇತ್ರದ ನಾಗಪ್ಪ ಕೆರೆಯಲ್ಲಿ ಮಿಂದು ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಗುಹಾಪ್ರವೇಶ ಆರಂಭ ಮಾಡಲಾಯಿತು.

ಆಗಸ್ಟ್ 17 ತುಲಾ ಸಂಕ್ರಮಣದಂದು ಪ್ರಾರಂಭಗೊಂಡ ಗುಹಾಪ್ರವೇಶ - ಗುಹಾ ತೀರ್ಥ ಸ್ನಾನ ಏಪ್ರೀಲ್ ತಿಂಗಳ ಮೇಷ ಸಂಕ್ರಮಣದವರೆಗೂ ಪ್ರತಿದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಗುಹಾತೀರ್ಥ ಸ್ನಾನಕ್ಕೆ ಅವಕಾಶವಿದೆ. ಹುಣ್ಣಿಮೆಯ ಸಂದರ್ಭ ಹುಣ್ಣಿಮೆ ತೀರ್ಥ ಸ್ನಾನ ಇಲ್ಲಿನ ವಿಶೇಷ.

Edited By : Ashok M
Kshetra Samachara

Kshetra Samachara

17/10/2024 02:16 pm

Cinque Terre

4.45 K

Cinque Terre

0

ಸಂಬಂಧಿತ ಸುದ್ದಿ