ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಸರಗೋಡು: ಬೋಟ್ ದುರಂತಕ್ಕೀಡಾಗಿ ಓರ್ವ ಮೀನುಗಾರ ಮೃತ್ಯು, ಮತ್ತೋರ್ವ ನಾಪತ್ತೆ

ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕೆ ಫೈಬರ್ ಬೋಟ್‌ ದುರಂತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ಸಂಭವಿಸಿದೆ. ಓರ್ವ ನಾಪತ್ತೆಯಾಗಿದ್ದು, 35 ಮಂದಿಯನ್ನು ರಕ್ಷಿಸಲಾಗಿದೆ.

ವಳಿಯಪರಂಬ ಕಡೆಯಿಂದ ಬರುತ್ತಿದ್ದ ಬೋಟ್‌ ಏಕಾಏಕಿ ದುರಂತಕ್ಕೀಡಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬೋಟ್‌ನಲ್ಲಿ 37 ಮಂದಿಯಿದ್ದರು ಎಂದು ತಿಳಿದು ಬಂದಿದೆ. ಕೇರಳ, ಒಡಿಶಾ ಮೂಲದ ಮೀನುಗಾರರು ಈ ಬೋಟ್‌ನಲ್ಲಿದ್ದರು. ರಕ್ಷಿಸಲ್ಪಟ್ಟವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nagesh Gaonkar
PublicNext

PublicNext

16/10/2024 08:58 pm

Cinque Terre

71.19 K

Cinque Terre

0

ಸಂಬಂಧಿತ ಸುದ್ದಿ