ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಎಸ್‌ಯುವಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬೈಕ್ - ಇಬ್ಬರು ಸವಾರರು ಸಾವು

ಕೋಲ್ಕತ್ತಾ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಿಂದ ಬೆಳಕಿಗೆ ಬಂದಿದೆ. ಈ ಆಘಾತಕಾರಿ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.

ವೀಡಿಯೊದಲ್ಲಿ, ರಸ್ತೆಯ ಮಧ್ಯದಲ್ಲಿ ವೇಗವಾಗಿ ಬಂದ ಬೈಕ್ ಒಂದು ಎಸ್‌ಯುವಿಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ನಂತರ ಅದು ಸ್ಫೋಟಗೊಂಡು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಸುರಕ್ಷತೆಯ ಕಾಳಜಿಯನ್ನು ಹೆಚ್ಚಿಸಿದೆ.

ವರದಿಗಳ ಪ್ರಕಾರ, ಶುಕ್ರವಾರ (ಅಕ್ಟೋಬರ್ 11) ಸುಮಾರು 12 ಗಂಟೆಗೆ ಹೂಗ್ಲಿಯ ಪೋಲ್ಬರ್ ರಾಜ್‌ಘಾಟ್ ಇಂಟರ್‌ಸೆಕ್ಷನ್‌ನಲ್ಲಿ ಈ ಘಟನೆ ಸಂಭವಿಸಿದೆ. ಇಬ್ಬರು ಬೈಕ್ ಸವಾರರ ನಡುವಿನ ರೇಸಿಂಗ್ ಸ್ಪರ್ಧೆಯ ವೇಳೆ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಒಂದು SUV ರಸ್ತೆ ಕ್ರಾಸ್‌ ಮಾಡಿ ಬಲಕ್ಕೆ ತಿರುಗುತ್ತಿದ್ದಾಗ ಒಂದು ವೇಗದ ಬೈಕ್ ವಾಹನದ ಮುಂದೆ ಹಾದುಹೋಗುತ್ತದೆ. ನಂತರ ವೇಗವಾಗಿ ಬಂದ ಮತ್ತೊಂದು ಬೈಕ್ ರಸ್ತೆಯ ಮಧ್ಯದಲ್ಲಿ ಎಸ್‌ಯುವಿಗೆ ಡಿಕ್ಕಿ ಹೊಡೆದು ದೊಡ್ಡ ಸ್ಫೋಟದ ನಂತರ ಬೆಂಕಿ ಹೊತ್ತಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Edited By : Vijay Kumar
PublicNext

PublicNext

14/10/2024 10:33 pm

Cinque Terre

53.79 K

Cinque Terre

0

ಸಂಬಂಧಿತ ಸುದ್ದಿ