ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲು ದುರಂತದಲ್ಲಿ 19 ಮಂದಿಗೆ ಗಾಯ - ಚೆಲ್ಲಾಪಿಲ್ಲಿಯಾದ ಬೋಗಿಗಳು.!

ಚೆನ್ನೈ: ತಮಿಳುನಾಡಿನ ತಿರುವಳ್ಳುವರ್ ಜಿಲ್ಲೆಯ ಗುಮ್ಮುಡಿಪೂಂಡಿಯಲ್ಲಿ ಶುಕ್ರವಾರ ರಾತ್ರಿ ಗೂಡ್ಸ್ ರೈಲೊಂದಕ್ಕೆ ಮೈಸೂರು–ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದಿದೆ. ಪರಿಣಾಮ 13 ಬೋಗಿಗಳು ಹಳಿತಪ್ಪಿ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ. ಈ ದುರಂತದ ನಂತರ ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

12 ಬೋಗಿಗಳು ಹಳಿ ತಪ್ಪಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಗೂಡ್ಸ್‌ ರೈಲಿನ ಎರಡು ಬೋಗಿಗಳು ಬೆಂಕಿಯಲ್ಲಿ ಬೆಂದ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅಪಘಾತದಿಂದಾಗಿ ಚೆನ್ನೈ, ದೆಹಲಿ, ಕೋಲ್ಕತ್ತ, ಹೈದರಾಬಾದ್ ಮತ್ತು ನಾಗ್ಪುರವನ್ನು ಇತರ ನಗರಗಳೊಂದಿಗೆ ಸಂಪರ್ಕಿಸುವ ಚೆನ್ನೈ-ವಿಜಯವಾಡ ವಿಭಾಗದಲ್ಲಿ ರೈಲು ಸೇವೆಗಳಲ್ಲಿ ಏರುಪೇರಾಗಿದೆ.

Edited By : Vijay Kumar
PublicNext

PublicNext

12/10/2024 11:38 am

Cinque Terre

167.78 K

Cinque Terre

2

ಸಂಬಂಧಿತ ಸುದ್ದಿ