ಹೈದರಾಬಾದ್: ಬರ್ತ್ ಡೇ ಪಾರ್ಟಿಗೆಂದು ಖಾಸಗಿ ಹೋಟೆಲ್ಗೆ ಬಂದಿದ್ದ ವ್ಯಕ್ತಿಯೋರ್ವ ನಾಯಿಯನ್ನು ಓಡಿಸುವ ಭರದಲ್ಲಿ 3ನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ದುರಂತ ಜರುಗಿದೆ.
ಈ ಘಟನೆ ಹೈದರಾಬಾದ್ನ ಚಂದಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿ ಪ್ರೈಡ್ ಹೋಟೆಲ್ನಲ್ಲಿ ನಡೆದಿದೆ. ಈ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್ ಆಗಿದೆ.
ರಾಮಚಂದ್ರಾಪುರದ ಅಶೋಕನಗರದಲ್ಲಿ ನೆಲೆಸಿರುವ ಉದಯ್ ಕುಮಾರ್ ಎಂಬಾತ ತಮ್ಮ ಸ್ನೇಹಿತರೊಂದಿಗೆ ವಿವಿ ಪ್ರೈಡ್ ಹೋಟೆಲ್ಗೆ ತೆರಳಿದ್ದ, ಮೂರನೇ ಮಹಡಿಯ ಕೊಠಡಿಯಲ್ಲಿ ಪಾರ್ಟಿ ಮಾಡಲಾಗಿತ್ತು.
ಪಾರ್ಟಿ ಮಧ್ಯೆ ಹೋಟೆಲ್ ರೂಂನಿಂದ ಹೊರಬಂದ ಉದಯ್ ಕುಮಾರ್ ಅಲ್ಲಿದ್ದ ನಾಯಿಯನ್ನು ನೋಡಿ, ಕೂಡಲೇ ಅದನ್ನು ಅಲ್ಲಿಂದ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ನಾಯಿ ಓಡಿದ್ದು ಅದರ ಹಿಂದೆಯೇ ಉದಯ್ ಕೂಡ ಓಡಿದ್ದಾನೆ. ಈ ವೇಳೆ ಆತ ಹೊಟೆಲ್ನ ಗೋಡೆಯ ತೆರೆದ ಕಿಟಕಿಗೆ ಡಿಕ್ಕಿಯಾಗಿ ಆಯತಪ್ಪಿ ಕಿಟಕಿ ಒಳಗಿನಿಂದ ಕೆಳಗೆ ಬಿದ್ದ ರಭಸಕ್ಕೆ ಉದಯ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿಯನ್ನು 24 ವರ್ಷದ ಉದಯ್ ಕುಮಾರ್ ಎಂದು ಗುರುತಿಸಲಾಗಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
PublicNext
22/10/2024 06:40 pm