ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಅದ್ದೂರಿಯಾಗಿ ಜರುಗಿದ ಹಜರತ್ ಪೀರ್ ಸುಭಾನಿ ದರ್ಗಾ ಗ್ಯಾರವಿ

ಕಲಘಟಗಿ : ಕಲಘಟಗಿ ಪಟ್ಟಣದ ಹಜರತ್ ಪೀರ್ ದರ್ಗಾ ಗ್ಯಾರವಿ ನಿನ್ನೆ ಸಾಯಂಕಾಲ ಅದ್ದೂರಿಯಾಗಿ ಜರುಗಿತು.

ಹಲವಾರು ವರ್ಷಗಳಿಂದ ನಡೆಸುತ್ತ ಬಂದಿರುವ ಈ ಗ್ಯಾರವಿಗೆ ಕಲಘಟಗಿ ಪಟ್ಟಣದ ಜನರು ಹಾಗೂ ಗ್ರಾಮೀಣ ಭಾಗದ ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು .ಈ ಗ್ಯಾರವಿಯಲ್ಲಿ ಜಾತಿ ಭೇದ ಇಲ್ಲದೆ ಹಿಂದು-ಮುಸ್ಲಿಂ ಭಾಂದವರು ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ದರ್ಗಾದಲ್ಲಿ ಪ್ರತಿ ವರ್ಷವು ಕಲಘಟಗಿ ಪಟ್ಟಣದ ಮುಸಲ್ಮಾನ್ ಭಾಂದವರು ವಿಜೃಂಭಣೆಯಿಂದ ಗ್ಯಾರವಿ ನಡೆಸುತ್ತಾ ಬಂದಿದ್ದು ಬಂದಿರುವ ಭಕ್ತಾದಿಗಳಿಗೆ ಊಟದ ವೆವಸ್ಥೆ ಕೂಡ ಮಾಡಿರುತ್ತಾರೆ. ಚಿಕ್ಕ ದರ್ಗಾ ಇದಾಗಿದ್ದರೂ ತಾಲೂಕಿನ ತುಂಬಾ ಪ್ರಸಿದ್ಧಿ ಪಡೆದಿದೆ. ಈ ದರ್ಗಾದ ಪ್ರಸಾದ ಸ್ವೀಕರಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದು ವಿಶೇಷವಾಗಿದೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Ashok M
Kshetra Samachara

Kshetra Samachara

16/10/2024 07:57 am

Cinque Terre

128.58 K

Cinque Terre

4

ಸಂಬಂಧಿತ ಸುದ್ದಿ